ಸಂಪಾಜೆ:ಸಂಪಾಜೆ ಗ್ರಾಮ ಪಂಚಾಯತ್ ಸಾಮಾನ್ಯ ಸಭೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಮತಿ ಶಕ್ತಿವೇಲು ಅದ್ಯಕ್ಷತೆಯಲ್ಲಿ ಪಂಚಾಯತ್ ಸಭಾಭವನದಲ್ಲಿ ನಡೆಯಿತು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸರಿತಾ ಡಿಸೋಜಾ ವರದಿ ಹಾಗೂ ಲೆಕ್ಕ ಪತ್ರ ಮಂಡಿಸಿದರು. ಗ್ರಾಮ ಪಂಚಾಯತ್ ಸ್ವಂತ ನಿಧಿ ಅನುದಾನದ ಕ್ರಿಯ ಯೋಜನೆ ತಯಾರಿಸಲಾಯಿತು, ರಸ್ತೆ ಕಾಂಕ್ರಿಟ್, ಪರಿಶಿಷ್ಟ ಜಾತಿ ಹಾಗೂ
ಪರಿಶಿಷ್ಟ ಪಂಗಡದ ಮನೆ ದುರಸ್ತಿಗೆ, ಬೀದಿ ದೀಪ ದುರಸ್ತಿ, ಕಾಮಗಾರಿಗಳಿಗೆ, ಚರಂಡಿ ಕಾಮಗಾರಿ, ಮಾಡಲಾಯಿತು.ಅಂಗನವಾಡಿ ಕೇಂದ್ರ ಅಭಿವೃದಿ ಮತ್ತಿತರ ಕಾಮಗಾರಿಗಳಿಗೆ ಅನುದಾನ ಮೀಸಲಿಡಲಾಯಿತು. ಗ್ರಾಮದ ಸಮಗ್ರ ಅಭಿವೃದ್ಧಿಯ ಬಗ್ಗೆ ಚರ್ಚೆ ನಡೆಯಿತು. ಕಸ ವಿಲೇವಾರಿ ಸಮಸ್ಯೆ. ಶಾಲಾ ಬಳಿ ಗುಟ್ಕಾ ಮಾರಾಟ, ಲೈಸನ್ಸ್ ಇಲ್ಲದೆ ವ್ಯಾಪಾರ ವಹಿವಾಟು ನಡೆಸುವ ಬಗ್ಗೆ ಚರ್ಚೆ ನಡೆಯಿತು.ಹಸಿ ಕಸ ಹಾಗೂ ಒಣ ಕಸ ಬೇರೆ ಬೇರೆ ಮಾಡಿ ಕೊಡದ ಅಂಗಡಿಗಳ ಕಸ ತೆಗೆಯದಿರುವುದು.ಕಸ, ಕೋಳಿ ವೆಸ್ಟ್, ಪ್ಲ್ಯಾಸ್ಟಿಕ್ ವಸ್ತುಗಳನ್ನು ಹಾಕುವವರ ಬಗ್ಗೆ ನಿಗಾ ವಹಿಸಲು ಹಾಗೂ ಸಿಸಿಟಿವಿ ಅಳವಡಿಕೆಗೆ ತೀರ್ಮಾನಿಸಲಾಯಿತು.ಪ್ಲಾಸ್ಟಿಕ್ ಮುಕ್ತ ಗ್ರಾಮ ಆಂದೋಲನ ಮಾಡಿ ಅಂಗಡಿಗಳಲ್ಲಿ ತಪಾಸಣೆ ಮಾಡಿ ದಂಡ ವಿಡಿಸುವುದು.
ವಸತಿ ಯೋಜನೆಯಡಿ ಮನೆ ನಿರ್ಮಾಣಕ್ಕೆ ಅರ್ಜಿ ಆಹ್ವಾನ ಅವಕಾಶ ಕಲ್ಪಿಸಲಾಗಿದೆ ಕೆಲವು ದಿನಗಳು ಮಾತ್ರ ಇದ್ದು ಬಾಕಿ ಇದ್ದಲ್ಲಿ ಸೇರಿಸುವುದು.
ಮಳೆಗಾಲ ಆರಂಭವಾಗುತ್ತಿರುವ ಹಿನ್ನಲೆ ಪೇಟೆಯಲ್ಲಿ ಗುಜಿರಿ, ಪ್ಲಾಸ್ಟಿಕ್, ಕೊಳೆತ ವಸ್ತುಗಳು, ಎಳನೀರು ಇನ್ನಿತರ ವಸ್ತುಗಳು ಸಾರ್ವಜನಿಕ ಸ್ಥಳದಿಂದ ತೆರವು ಗೊಳಿಸುವ ನಿಟ್ಟಿನಲ್ಲಿ ಆಶಾ ಕಾರ್ಯಕರ್ತೆಯರ ಹಾಗೂ ಆರೋಗ್ಯ ಕಾರ್ಯಕರ್ತೆಯರು ಪರೀಶೀಲನೆ ನಡೆಸಲು ಸೂಚಿಸಲಾಯಿತು.
ಪೇಟೆಯಲ್ಲಿ ವರ್ತಕರು ಚರಂಡಿ ಪೂಟ್ಬಾತ್ ಅತಿಕ್ರಮಣ ಮಾಡಿದ್ದಲ್ಲಿ ತೆರವು ಗೊಳಿಸುವುದು ರಾಷ್ಟೀಯ ಹೆದ್ದಾರಿಯಲ್ಲಿ ಪ್ರಾಧಿಕಾರದ ವತಿಯಿಂದ ಚರಂಡಿ ಕಾಮಗಾರಿ ನಡೆಸುವ ಸಂದರ್ಭದಲ್ಲಿ ಸಹಕಾರ ನೀಡುವುದು .ಜೂನ್ ತಿಂಗಳ ವರೆಗೆ ಮನೆ ತೆರಿಗೆ ಮೇಲೆ 5% ರಿಯಾಯಿತಿ ಇದ್ದು ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬೇಕಾಗಿ ಮಾಹಿತಿ ನೀಡುವುದು.
ಹಸಿ ಹಾಗೂ ಒಣ ಕಸ ವಿಚಾರದಲ್ಲಿ ಸಾರ್ವಜನಿಕ ಹಾಗೂ ವರ್ತಕರ ಸಹಕಾರ ಕೋರಲು ತೀರ್ಮಾನಿಸಲಾಯಿತು
ಪ್ರತೀ ಮನೆಯವರು ಇಂಗು ಗುಂಡಿ ಮಾಡುವುದು. ಸಾರ್ವಜನಿಕ ಚರಂಡಿ ಹಾಗೂ ರಸ್ತೆಗಳಿಗೆ ನೀರು ಬಿಟ್ಟವರ ಮೇಲೆ ಕ್ರಮ ಕೈಗೊಳ್ಳಲು ತೀರ್ಮಾನಿಸಲಾಯಿತು.
ಸಭೆಯಲ್ಲಿ ಉಪಾಧ್ಯಕ್ಷ ಎಸ್ ಕೆ, ಹನೀಫ್, ಸದಸ್ಯರಾದ ಜಿ ಕೆ. ಹಮೀದ್ ಗೂನಡ್ಕ, ಜಗದೀಶ್ ರೈ, ಸುಂದರಿ, ಶೌವಾದ್ ಗೂನಡ್ಕ, ವಿಮಲಾ ಪ್ರಸಾದ್,ಲಿಸ್ಸಿ ಮೊನಾಲಿಸಾ, ಅನುಪಮ, ರಜನಿ ಶರತ್, ಸುಶೀಲಾ ಉಪಸ್ಥಿತರಿದ್ದರು.