ಸುಳ್ಯ:ಬಹು ಕಾಲದ ಬೇಡಿಕೆಯಾದ ಸುಳ್ಯ ತಾಲೂಕಿನ ಅರಂತೋಡು ಗ್ರಾಮದ ಅರಮನೆಗಯ ಎಂಬಲ್ಲಿ ಸಂಪರ್ಕ ಸೇತುವೆ ನಿರ್ಮಾಣ ಪೂರ್ತಿಯಾಗಿದ್ದು ಮೇ.17ರಂದು ಪೂ.11ಗಂಟೆಗೆ ಉದ್ಘಾಟನೆ ನಡೆಯಲಿದೆ. ಶಾಸಕಿ ಭಾಗೀರಥಿ ಮುರುಳ್ಯ ಸೇತುವೆ ಉದ್ಘಾಟಿಸುವರು, ರಾಜಕೀಯ, ಸಾಮಾಜಿಕ ಮುಖಂಡರು ಭಾಗವಹಿಸಲಿದ್ದಾರೆ ಎಂದು
ಶಾಸಕರ ಕಚೇರಿ ತಿಳಿಸಿದೆ. ಉಪಶಮನ ನಿಧಿ (ಮಿಟಿಗೇಷನ್ ಫಂಡ್)ಯಡಿ ಅರಮನೆಗಯದಲ್ಲಿ ಸಂಪರ್ಕ ಸೇತುವೆ ನಿರ್ಮಾಣಕ್ಕೆ 1.75 ಕೋಟಿ ಅನುದಾನವನ್ನು ಬಿಡುಗಡೆ ಮಾಡಲಾಗಿತ್ತು.ರಾಜ್ಯ ವಿಪತ್ತು ಉಪಶಮನ ನಿಧಿಯಡಿ ದ.ಕ.ಜಿಲ್ಲೆಗೆ ಬಿಡುಗಡೆಯಾದ ಅನುದಾನದಲ್ಲಿ ಅರಮನೆಗಯ ಸಂಪರ್ಕ ಸೇತುವೆಗೆ ಅನುದಾನ ಬಿಡುಗಡೆಯಾಗಿ ಕಳೆದ ನವೆಂಬರ್ ತಿಂಗಳಲ್ಲಿ ಕಾಮಗಾರಿಗೆ ಗುದ್ದಲಿಪೂಜೆ ನೇರ ಸೇರಿಸಲಾಗಿತ್ತು. ಇದೀಗ ಸೇತುವೆ ಕಾಮಗಾರಿ ಪೂರ್ತಿಯಾಗಿದೆ.30 ಮೀಟರ್ ಉದ್ದ ಹಾಗೂ 6.40 ಮೀಟರ್ ಅಗಲದ ಸೇತುವೆ ನಿರ್ಮಿಸಲಾಗಿದೆ.
ಇಲ್ಲಿ ಜನರ ಸಂಚಾರಕ್ಕೆ ಶಾಶ್ವತ ಪರಿಹಾರ ಮಾಡಬೇಕು ಎಂಬುದು ಹಲವು ವರ್ಷಗಳ ಬೇಡಿಕೆಯಾಗಿತ್ತು.














