ಸುಳ್ಯ:ಸಫಲ ಉದ್ಯಮ ಇಲೆಕ್ಟ್ರಾನಿಕ್ಸ್ ವತಿಯಿಂದ ನಡೆಸಲ್ಪಡುತ್ತಿರುವ ಸುಲಭ ಕಂತು ಯೋಜನೆಯ ಎರಡನೇ ಆವೃತ್ತಿಯ ಬಂಪರ್ ಬಹುಮಾನದ ಮೊದಲ ಡ್ರಾ ಸೆ.15 ರಂದು ಸುಳ್ಯದ ಅಂಬೆಟಡ್ಕದ ಸಫಲ ಉಧ್ಯಮ ಇಲೆಕ್ಟ್ರಾನಿಕ್ ಶೋ ರೂಂನಲ್ಲಿ ನಡೆಯಿತು.ಕಾರ್ಡ್ ಸಂಖ್ಯೆ

5570 ಚೇತನ್ ಆರಂತೋಡು ಒಂದು ಲಕ್ಷ ಮೌಲ್ಯದ ಗೃಹೋಪಯೋಗಿ ವಸ್ತುಗಳ ವಿಜೇತ ರಾಗಿದ್ದಾರೆ.ಅದೃಷ್ಟ ಡ್ರಾ ವಿಜೇತರ ಆಯ್ಕೆಯನ್ನು ಖ್ಯಾತ ಗಾಯಕ, ಸಂಗೀತ ನಿರ್ದೇಶಕ ಕಿರುತೆರೆ ನಟ ಶಶಿಧರ ಕೋಟೆ ನಡೆಸಿಕೊಟ್ಟರು, ಈ ಸಂದರ್ಭದಲ್ಲಿ ಸಂಸ್ಥೆಯ ಪಾಲುದಾರರಾದ ಮಹೇಶ್ ಮೇರ್ಕಜೆ, ಸತೀಶ್ ಕಾಟೂರು, ಮಹೇಶ್ ಉಗ್ರಾಣಿಮನೆ, ಸತೀಶ್ ಹೊದ್ದೆಟ್ಟಿ, ಸಂಸ್ಥೆಯ ಸಿಬ್ಬಂದಿಗಳು, ಗ್ರಾಹಕರು ಉಪಸ್ಥಿತರಿದ್ದರು.











