ರಾಯಪುರ: ವಿರಾಟ್ ಕೊಹ್ಲಿ ಮತ್ತು ಋತುರಾಜ್ ಗಾಯಕವಾಡ ಅವರ ಶತಕದ ಬಲದಿಂದ ಭಾರತ ತಂಡವು ಒಡ್ಡಿದ ದೊಡ್ಡ ಮೊತ್ತದ ಗುರಿಯನ್ನು ಹಿಮ್ಮೆಟ್ಟಿದ ದಕ್ಷಿಣ ಆಫ್ರಿಕಾ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ರೋಚಕ ಜಯ ಸಾಧಿಸಿತು. ಎರಡನೇ ಪಂದ್ಯದಲ್ಲಿ 359 ರನ್ಗಳ ಕಠಿಣ ಗುರಿಯನ್ನು ಬೆನ್ನಟ್ಟಿದ ಪ್ರವಾಸಿ ಬಳಗವು
4 ವಿಕೆಟ್ಗಳ ಗೆಲುವು ದಾಖಲಿಸಿತು. ಏಡನ್ ಮರ್ಕರಂ (110 ರನ್) ಅವರ ಶತಕ, ಮ್ಯಾಥ್ಯೂ ಬ್ರೀಜ್(68 ರನ್) ಹಾಗೂ ಡಿವಾಲ್ಡ್ ಬ್ರೆವಿಸ್ (54 ರನ್) ಅವರು ಅರ್ಧ ಶತಕದಿಂದ ತಂಡ ಗೆಲುವಿನ ದಡ ಸೇರಿತು. ದಕ್ಷಿಣ ಆಫ್ರಿಕಾ ತಂಡವು ಮೂರು ಪಂದ್ಯಗಳ ಸರಣಿಯಲ್ಲಿ 1–1ರ ಸಮಬಲ ಸಾಧಿಸಿತು. ಇನ್ನೊಂದು ಪಂದ್ಯ ಬಾಕಿ ಇದೆ.
ವಿರಾಟ್ ಕೊಹ್ಲಿ (102; 93ಎಸೆತ) ಮತ್ತು ಋತುರಾಜ್ ಗಾಯಕವಾಡ (105; 83ಎಸೆತ) ಅವರ ಶತಕ ಹಾಗೂ ನಾಯಕ ಕೆ.ಎಲ್.ರಾಹುಲ್ ಅರ್ಧ ಶತಕದ ನೆರವಿನಿಂದ ಭಾರತ 50 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 358 ರನ್ ಪೇರಿಸಿತು. ನಾಯಕ ಕೆ.ಎಲ್ ರಾಹುಲ್ (ಔಟಾಗದೇ 66) ಅವರೂ ಉಪಯುಕ್ತ ಕಾಣಿಕೆ ನೀಡಿದರು.ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡವು 49.2 ಓವರ್ಗಳಲ್ಲಿ 6 ವಿಕೆಟ್ಗಳಿಗೆ 362 ರನ್ ಗಳಿಸಿತು.
ಭಾರತದ ಯಾವುದೇ ಬೌಲರ್ಗಳು ಪರಿಣಾಮಕಾರಿಯಾಗಿರಲಿಲ್ಲ. ಆಫ್ರಿಕಾ ಬೌಲರ್ಗಳು ಲೀಲಾಜಾಲವಾಗಿ ರನ್ ಪೇರಿಸಿದರು.












