ಬಳ್ಪ:ಸುಳ್ಯ ತಾಲೂಕಿನ ಬಳ್ಪ ಗ್ರಾಮದ ಎಡೋನಿ ಎಂಬಲ್ಲಿ ರಾಜ್ಯ ಹೆದ್ದಾರಿ ಸಂಪೂರ್ಣ ಹದಗೆಟ್ಟಿದ್ದು ರಸ್ತೆಯಲ್ಲಿ ಹಾಕಲಾದ ಡಾಮರು ಎದ್ದು ಹೋಗಿ ಹೊಂಡಗುಂಡಿಗಳಿಂದ ಕೂಡಿದ್ದು ಸಂಚಾರಕ್ಕೆ ತೀವ್ರ ಅನಾನುಕೂಲ ಆಗಿದೆ. ಇಲ್ಲಿವಅಪಘಾತ ಸಂಭವಿಸಿ ದ್ವಿಚಕ್ರ ವಾಹನ ಸವಾರರು ಕೈ ಕಾಲು ಮುರಿದಿಕೊಳ್ಳುತ್ತಿರುವ ಪರಿಸ್ಥಿತಿ ಉಂಟಾಗಿದೆ. ಈ ಕುರಿತು
ಬಳ್ಪ ಶ್ರೀ ವಿಷ್ಣು ಮೂರ್ತಿ ದೈವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರಾದ ಡಾ.ದೇವಿ ಪ್ರಸಾದ್ ಕಾನತ್ತೂರು ಅವರು ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಹಾಗೂ ಗುತ್ತಿಗೆ ದಾರರಿಗೆ ದೂರವಾಣಿ ಮೂಲಕ ಸಂಪರ್ಕಿಸಿ ರಸ್ತೆ ಸರಿ ಪಡಿಸುವಂತೆ ಆಗ್ರಹಿಸಿದ್ದಾರೆ. ಎರಡು ದಿನಗಳ ಒಳಗೆ ರಸ್ತೆ ಸರಿಪಡಿಸದಿದ್ದರೆ ರಸ್ತೆ ಕಾಮಗಾರಿ ಕುರಿತು

ಲೋಕಾಯುಕ್ತರಿಗೆ ದೂರು ನೀಡುವುದಾಗಿ ತಿಳಿಸಿದರು. ಈ ಹಿನ್ನಲೆಯಲ್ಲಿ ಕೂಡಲೇ ಗುತ್ತಿಗೆದಾರರು ಆಗಮಿಸಿ ಕೂಡಲೇ ರಸ್ತೆ ದುರಸ್ತಿ ಮಾಡಿ ಕೊಡುವುದಾಗಿ ತಿಳಿಸಿದ್ದಾರೆ ಎಂದು ಡಾ.ದೇವಿಪ್ರಸಾದ್ ಕಾನತ್ತೂರು ತಿಳಿಸಿದ್ದಾರೆ. ಇವರೊಂದಿಗೆ ಬಳ್ಪ ವಿಷ್ಣು ಮೂರ್ತಿ ದೈವಸ್ಥಾನದ ಆಡಳಿತ ಮಂಡಳಿಯ ಉಪಾಧ್ಯಕ್ಷ ಉಮೇಶ್ ಬುಡೆಂಗಿ ಮತ್ತು ಕೋಶಾಧಿಕಾರಿ ಸಂತೋಷ ಕುಮಾರ್ ರೈ ಪಲ್ಲತ್ತಡ್ಕ ಇದ್ದರು.














