ಸುಬ್ರಹ್ಮಣ್ಯ: ಕುಮಾರಧಾರ ನದಿಯ ನೆರೆ ನೀರಿನಲ್ಲಿ ಆನೆ ಮೃತದೇಹ ತೇಲಿಬಂದ ಘಟನೆ ಸೋಮವಾರ ರಾತ್ರಿ ನಡೆದಿದೆ.
ನಿರಂತರ ಮಳೆಯಿಂದ ತುಂಬಿ ಹರಿಯುತ್ತಿರುವ ನೀರಿನ ಮಟ್ಟವನ್ನು ವೀಕ್ಷಣೆಗೆ ಸೋಮವಾರ ಸ್ಥಳೀಯರು ತೆರಳಿದ್ದ ವೇಳೆ ನೆರೆ ನೀರಿನಲ್ಲಿ ತೇಲಿಬರುತ್ತಿರುವುದು
ಕಂಡುಬಂದಿದ್ದು ಸೂಕ್ಷ್ಮವಾಗಿ ಗಮನಿಸಿದಾಗ ಆನೆ ಮೃತದೇಹದಂತೆ ಕಂಡು ಬಂದಿದೆ.ಆನೆ ಮೃತದೇಹ ನೀರಿನಲ್ಲಿ ಕೊಚ್ಚಿ ಹೋಗಿದೆ ಎನ್ನಲಾಗಿದೆ.ನಿರಂತರ ಮಳೆಯಿಂದಾಗಿ ಸುಬ್ರಹ್ಮಣ್ಯದ ಕುಮಾರಧಾರ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿದ್ದು ಕುಮಾರಧಾರ ಸ್ನಾನಘಟ್ಟ ಮುಳುಡೆ ಸ್ಥಿತಿಯಲ್ಲೇ ಇದೆ.