ಕೊಯನಾಡು: ಕೊಯನಾಡು ಸರ್ಕಾರಿ ಶಾಲೆ ಮೇಲೆ ಮತ್ತೆ ಬರೆ ಕುಸಿತವಾಗಿದೆ. ಭಾರಿ ಮಳೆಗೆ ಶಾಲಾ ಕಟ್ಟಡದ ಮೇಲೆ ಬರೆ ಕುಸಿದಿದ್ದು ಭಾರಿ ಹಾನಿ ಸಂಭವಿಸಿದೆ .ಕ್ಲಾಸ್ ರೂಂಗಳು ಜಖಂಗೊಂಡಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.ಮಳೆಯ ಹಿನ್ನೆಲೆಯಲ್ಲಿ ಕೊಡಗು ಜಿಲ್ಲಾಡಳಿತ ಜಿಲ್ಲೆಯ ಎಲ್ಲ ಶಾಲೆಗಳಿಗೂ ರಜೆ ಘೋಷಣೆ ಮಾಡಿದೆ.
ಈ ಹಿಂದೆ ಹಲವು ಸಲ ಇದೇ ಶಾಲೆಯ ಮೇಲೆ ಬರೆ ಕುಸಿದಿತ್ತು.