ಸುಳ್ಯ:ಎಸ್ಎಸ್ಎಲ್ಸಿ ಪರೀಕ್ಷೆಯ ಉತ್ತರ ಪತ್ರಿಕೆ ಮರು ಮೌಲ್ಯಮಾಪನದಲ್ಲಿ ಸುಳ್ಯದ ಸೈಂಟ್ ಜೋಸೆಫ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿನಿ ಸಾನ್ವಿ ಪಿ.ಎನ್. ಗೆ 6 ಅಂಕ ಹೆಚ್ಚು ಬಂದಿದೆ. ಫಲಿತಾಂಶದಲ್ಲಿ 611ರ ಬದಲು 617 ಅಂಕ ಪಡೆದುಕೊಂಡಿದ್ದಾರೆ. ಗಣಿತ ಉತ್ತರ ಪತ್ರಿಕೆಯ
ಮೌಲ್ಯ ಮಾಪನದಲ್ಲಿ 4 ಅಂಕ ಹಾಗೂ
ಇಂಗ್ಲಿಷ್ ಭಾಷಾ ಪತ್ರಿಕೆಯಲ್ಲಿ 2 ಸೇರಿ ಒಟ್ಟು 6 ಅಂಕ ಲಭಿಸಿದೆ. 123 ಅಂಕಗಳು ಬಂದಿದ್ದ ಇಂಗ್ಲೀಷಿನಲ್ಲಿ ಮರು ಮೌಲ್ಯ ಮಾಪನದ ಬಳಿಕ 125 ಪೂರ್ಣ ಅಂಕ ಬಂದಿದೆ. ಒಟ್ಟು ಶೇ.98.72 ಅಂಕ ಪಡೆದಿದ್ದಾಳೆ.
ಸಾನ್ವಿ ಪಿ. ಎನ್.ಜಪಾನ್ ನಲ್ಲಿ ಉದ್ಯೋಗಿಯಾಗಿರುವ ನಾರಾಯಣ ಗೌಡ ಪೋಳ್ಯ ಹಾಗೂ ಸುಳ್ಯದ ಕೇರ್ಪಳದ ವಿನುತಾ ನಾರಾಯಣ ದಂಪತಿಗಳ ಪುತ್ರಿ.