ಸುಳ್ಯ:ಸುಳ್ಯ ತಾಲೂಕು ಸಮಸ್ತ ಸಂಯುಕ್ತ ಜಮಾಅತ್ ವತಿಯಿಂದ ತಾಲ್ಲೂಕಿನ 150 ಕುಟುಂಬಗಳಿಗೆ ಆಹಾರ ಧಾನ್ಯಗಳ ರಂಝಾನ್ ಕಿಟ್ಟನ್ನು ಮಾ.9 ರಂದು ಸುಳ್ಯದ ಸುಪ್ರೀಂ ಹಾಲ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿತರಿಸಲಾಯಿತು . ಕೋಶಾಧಿಕಾರಿ ಹಮೀದ್ ಹಾಜಿ ದುವಾ ನೆರವೇರಿಸಿದರು. ಸಮಸ್ತ ಸಂಯುಕ್ತ ಜಮಾಅತ್ ಅಧ್ಯಕ್ಷ ಹಾಜಿ ಅಬ್ದುಲ್ ಖಾದರ್ ಬಾಯಂಬಾಡಿ ಅಧ್ಯಕ್ಷತೆ ವಹಿಸಿದ್ದರು. ಜಾವಗಲ್ ಟ್ರಸ್ಟ್ ಅಧ್ಯಕ್ಷ
ಇಸಾಕ್ ಹಾಜಿ ಪಾಜಪ್ಪಳ್ಳ ಕಿಟ್ ವಿತರಣೆಗೆ ಚಾಲನೆ ನೀಡಿದರು. ಮುಖ್ಯ ಅತಿಥಿಯಾಗಿ ತೆಕ್ಕಿಲ್ ಪ್ರತಿಷ್ಠಾನದ ಅಧ್ಯಕ್ಷ ಟಿ. ಎಂ ಶಾಹಿದ್ ತೆಕ್ಕಿಲ್ ಮಾತನಾಡಿದರು. ಸಂಯುಕ್ತ ಜಮಾಅತ್ ಉಪಾಧ್ಯಕ್ಷರಾದ ಹಾಜಿ ಎಚ್.ಎ ಅಬ್ಬಾಸ್ ಸೆಂಟ್ಯಾರ್, ಹಾಜಿ ಇಬ್ರಾಹಿಂ ಕತ್ತಾರ್,ಕೋಶಾಧಿಕಾರಿ ಹಮೀದ್ ಹಾಜಿ, ಮದರಸ ಮ್ಯಾನೇಜ್ಮೆಂಟ್ ಅಧ್ಯಕ್ಷ ತಾಜ್ ಮಹಮ್ಮದ್ ಸಂಪಾಜೆ, ಜಮೀಯತುಲ್ ಫಲಾಹ್ ಅಧ್ಯಕ್ಷ ಕೆ. ಎಂ ಅಬೂಬಕರ್ ಪಾರೆಕ್ಕಲ್ ಸಂಪಾಜೆ ಗ್ರಾ. ಪಂ. ಮಾಜಿ ಅಧ್ಯಕ್ಷ ಜಿ.ಕೆ ಹಮೀದ್ ಗೂನಡ್ಕ, ಕಳಂಜ ಜುಮ್ಮಾ ಮಸೀದಿ ಅಧ್ಯಕ್ಷ ಎ.ಬಿ ಮೊಯ್ದೀನ್, ಸಂಪಾಜೆ ಜುಮಾ ಮಸೀದಿ

ಅಧ್ಯಕ್ಷ ಮೊಹಮ್ಮದ್ ಹಮೀದಿಯ, ಸುಳ್ಯ ವಲಯ ಎಸ್ಕೆಎಸ್ಎಸ್ಎಫ್ ಅಧ್ಯಕ್ಷ ಅಬೂಬಕರ್ ಪೂಪಿ, ಹಾಜಿ ಅಹ್ಮದ್ ಸುಪ್ರೀಂ ಹಾಜಿ ಅಹ್ಮದ್ ಪಾರೆ, ಹಂಸ ದೊಡ್ಡತೋಟ, ಅಬ್ದುಲ್ ಖಾದರ್ ಹಾಜಿ ಅಜ್ಜಾವರ, ಅಮೀರ್ ಕುಕ್ಕುಂಬಳ , ಯು. ಪಿ ಬಶೀರ್ ಬೆಳ್ಳಾರೆ, ಸಿ. ಎಚ್ ಮುಹಮ್ಮದ್ ಪೈಂಬಚ್ಚಾಲ್ ಇಕ್ಬಾಲ್ ಸುಣ್ಣಮೂಲೆ, ಇಬ್ರಾಹಿಂ ದುಗಲಡ್ಕ, ಅಂಬ ಸಂಪಾಜೆ, ಅಬೂಬಕರ್ ಅಜ್ಜಾವರ, ಅಬ್ದುಲ್ ಖಾದರ್ ಕುಂಬರ್ಚೋಡು, ಅಬ್ದುಲ್ ಕರೀಂ ಕುಂಬರ್ಚೊಡ್, ಹನೀಫ್, ಅಬ್ದುಲ್ಲಾ ಮಾರ್ಗ ಮಂಡೆಕೋಲು, ಅಬ್ದುಲ್ಲಾ ಕನಕಮಜಲು, ಇಸ್ಮಾಯಿಲ್ ಕಳಂಜ,ಮಿದ್ಲಾಜ್ ದಾರಿಮಿ, ಝಕರಿಯ ದಾರಿಮಿ, ಆಶಿಕ್ ಸುಳ್ಯ, ನಝೀರ್ ಸುಪ್ರೀಂ, ಕಯ್ಯೂಮ್ ಕಟ್ಟೆಕ್ಕಾರ್ ಮೊದಲಾದವರು ಉಪಸ್ಥಿತರಿದ್ದರು. ಪ್ರದಾನ ಕಾರ್ಯದರ್ಶಿ ಅಶ್ರಫ್ ಗುಂಡಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.