ಸುಳ್ಯ:ಜೇಸಿಐ ಸುಳ್ಯ ಪಯಸ್ವಿನಿ ವತಿಯಿಂದ ಶ್ರೀ ಶಾರದಾ ಪದವಿ ಪೂರ್ವ ಕಾಲೇಜಿನಲ್ಲಿ ವಿಶ್ವ ರಕ್ತದಾನಿಗಳ ದಿನದ ಅಂಗವಾಗಿ ರಕ್ತದಾನ ಜಾಗೃತಿ ಕಾರ್ಯಾಗಾರ ಹಾಗೂ ರಕ್ತದಾನ ಸೇವಾ ರತ್ನ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನಡೆಯಿತು.ಶ್ರೀ ಶಾರದಾ ಪದವಿಪೂರ್ವ ಕಾಲೇಜಿನ
ಪ್ರಾಂಶುಪಾಲೆ ಸ್ವರ್ಣಕಲಾ ಎ. ಎಸ್ ಉದ್ಘಾಟಿಸಿದರು. ಜೆಸಿಐ ಅಧ್ಯಕ್ಷೆ ಲತಾಶ್ರೀ ಸುಪ್ರೀತ್ ಮೋಂಟಡ್ಕ ಅಧ್ಯಕ್ಷತೆ ವಹಿಸಿದ್ದರು.ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜಿನ ಅಸೋಸಿಯೇಟ್ ಪ್ರೊಫೇಸರ್ ಡಾ. ಅವಿನಾಶ್ ಎಸ್ ರಕ್ತದಾನದ ಬಗ್ಗೆ ಉಪನ್ಯಾಸ ನೀಡಿದರು.
ಮುಖ್ಯ ಅತಿಥಿಗಳಾಗಿ ದಕ್ಷಿಣ ಕನ್ನಡ ಜೇನು ವ್ಯವಸಾಯಗಾರರ ಸಹಕಾರಿ ಸಂಘದ ಅಧ್ಯಕ್ಷ ಚಂದ್ರ ಕೋಲ್ಚಾರ್ ಅಭಿನಂದನಾ ಮಾತುಗಳನ್ನಾಡಿದರು.
ರಕ್ತದಾನಿ ಶೈಲೇಶ್ ಅಂಬೆಕಲ್ಲು ಅವರಿಗೆ ಜೇಸಿಐ ಸುಳ್ಯ ಪಯಸ್ವಿನಿಯ ರಕ್ತದಾನ ಸೇವಾ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.ಜೆಸಿಐ ಮಾಜಿ ಅಧ್ಯಕ್ಷ ಪಿ. ಎಸ್ ಗಂಗಾಧರ ಉಪಸ್ಥಿತರಿದ್ದರು. ಸತ್ಯಶಾಂತಿ ತ್ಯಾಗ ಮೂರ್ತಿ ಅತಿಥಿಗಳನ್ನು ವೇದಿಕೆಗೆ ಆಹ್ವಾನಿಸಿ, ಪ್ರಶಾಂತ್ ಅಂಬೆಕಲ್ಲು ಜೇಸಿವಾಣಿ ವಾಚಿಸಿದರು. ಕಾರ್ಯಕ್ರಮ ಸಂಚಾಲಕ ಮಹೇಶ್ ಮೇರ್ಕಜೆ ಸನ್ಮಾನ ಪತ್ರ ವಾಚಿಸಿದರು. ಕಾರ್ಯದರ್ಶಿ ತಾರಾ ಮಾಧವ ವಂದಿಸಿದರು.








