ಸುಳ್ಯ:ಕಳೆದ ಎರಡು ದಿನಗಳಿಂದ ಮಳೆ ಬಿರುಸಿಗೊಂಡಿದೆ.ನಿನ್ನೆ ಮಳೆ ಎಡೆಬಿಡದೆ ಮಳೆ ಸುರಿದಿದೆ. ಸುಳ್ಯ ನಗರದಲ್ಲಿ ಇಂದು ಬೆಳಿಗ್ಗೆ 8 ಗಂಟೆಗೆ ಕೊನೆಗೊಂಡ 24 ಗಂಟೆಯಲ್ಲಿ 104 ಮಿ.ಮಿ.ಮಳೆ ಸುರಿದಿದೆ ಎಂದು ಸುಳ್ಯ ನಗರದಲ್ಲಿ ಪ್ರತಿ ದಿನ ಸುರಿದ ಮಳೆಯನ್ನು
ದಾಖಲಿಸುವ ಮಾಡುವ ಶ್ರೀಧರ ರಾವ್ ಹೈದಂಗೂರು ಮಾಹಿತಿ ನೀಡಿದ್ದಾರೆ.ಇವರ ಮಳೆ ಲೆಕ್ಕ ಪ್ರಕಾರ ಈ ವರ್ಷ ಮೊದಲ ಬಾರಿಗೆ 100 ಮಿ.ಮಿ.ಗಿಂತ ಅಧಿಕ ಮಳೆ ಸುರಿದಿದೆ.
ಈ ಮಧ್ಯೆ ರಾಜ್ಯದಾದ್ಯಂತ ಒಂದು ವಾರ ಬಿರುಗಾಳಿ ಹಾಗೂ ಸಿಡಿಲು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ ಇದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.ರಾಜ್ಯದ ಕರಾವಳಿ ತೀರದ ಪ್ರದೇಶಗಳು ಹಾಗೂ ಮಲೆನಾಡಿನ ವ್ಯಾಪ್ತಿಗೆ ಒಳಪಡುವ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆಯಿದೆ.ಇನ್ನುಳಿದಂತೆ ಒಳನಾಡು ಭಾಗಗಳಲ್ಲಿ ಭಾಗಶಃ ಮೋಡಕವಿದ ವಾತಾವರಣವಿದ್ದು ಸಾಧಾರಣ ಮಳೆಯಾಗಲಿದೆ ಎಂಬ ಸೂಚನೆ ಇದೆ.









