ಸುಳ್ಯ:ಸುಳ್ಯ ಇಂಟಕ್ ಕಾಂಗ್ರೆಸ್ ವತಿಯಿಂದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್ ಅವರ ಹುಟ್ಟು ಹಬ್ಬ ಅಚರಣೆ ಜು.29 ರಂದು ಸುಳ್ಯದ ಸಾಂದೀಪ್ ಶಾಲೆಯಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ
ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ.ಶಹೀದ್ ತೆಕ್ಕಿಲ್, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ, ಶಾಲಾ ಸಂಚಾಲಕ ಎಂ. ಬಿ. ಸದಾಶಿವ,ಸುಡಾ ಅಧ್ಯಕ್ಷ ಕೆ. ಎಂ. ಮುಸ್ತಾಫ,ಸುಳ್ಯ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ,ಗೌಡ ಯುವ ಸೇವಾ ಸಂಘದ ಅಧ್ಯಕ್ಷ
ಪಿ. ಎಸ್.ಗಂಗಾಧರ ಶುಭ ಹಾರೈಸಿ ಮಾತನಾಡಿದರು.
ಹುಟ್ಟು ಹಬ್ಬ ಕಾರ್ಯಕ್ರಮ ಆಯೋಜಕ ಇಂಟಕ್ ಕಾಂಗ್ರೆಸ್ ಅಧ್ಯಕ್ಷ ಶಾಫಿ ಕುತ್ತಮೊಟ್ಟೆ ಅಧ್ಯಕ್ಷತೆ ವಹಿಸಿದ್ದರು.ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಭವಾನಿಶಂಕರ ಕಲ್ಮಡ್ಕ,ಯುವ ಕಾಂಗ್ರೆಸ್ ಅಧ್ಯಕ್ಷ ಚೇತನ್ ಕಜೆಗದ್ದೆ, ಮುಖಂಡರಾದ ಶ್ರೀಹರಿ ಕುಕ್ಕುಡೇಲು, ದೇವಿಡ್ ಧೀರಾ ಕ್ರಾಸ್ತಾ ,ಪದ್ಮನಾಭ ಹರ್ಲಡ್ಕ,ಶರೀಫ್ ಕಂಠಿ, ಇಕ್ಬಾಲ್ ಸುಣ್ಣಮೂಲೆ, ಪ್ರಮೋದ್ ಬೊಳ್ಳಾಜೆ, ಶಹೀದ್ ಪಾರೆ, ಮದುಸೂದನ ಬೂಡು, ಮೊದಲಾದವರು ಉಪಸ್ಥಿತರಿದ್ದರು.
ರಾಜು ಪಂಡಿತ್ ವಂದಿಸಿ, ಎಂ.ಜೆ.ಶಶಿಧರ ಕಾರ್ಯಕ್ರಮ ನಿರೂಪಿಸಿದರು.ಸಾಂದೀಪ್ ಶಾಲೆಯ ವಿದ್ಯಾರ್ಥಿಗಳ ಮೂಲಕ ಕೇಕ್ ಕಟ್ ಮಾಡಿಸಿ ವಿದ್ಯಾರ್ಥಿಗಳ ಜೊತೆ ಸಹಬೋಜನ ಮಾಡುವುದರ ಮೂಲಕ ಹುಟ್ಟು ಹಬ್ಬ ಆಚರಿಸಲಾಯಿತು.
ಬಿ.ಕೆ ಹರಿಪ್ರಸಾದ್ ಅವರು ಹುಟ್ಟು ಹಬ್ಬ ಆಯೋಜನೆ ಮಾಡಿದ ಶಾಫಿ ಕುತ್ತಮೊಟ್ಟೆ ಅವರಿಗೆ ಪೊನ್ ಕರೆಮಾಡಿ ಸಾಂದೀಪ್ ಶಾಲೆ ಅಧ್ಯಕ್ಷ ಸದಾಶಿವ ಅವರಲ್ಲಿ ಮಾತನಾಡಿ ಶಾಲೆಯ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.









