ಸುಳ್ಯ:ಸುಳ್ಯ ತಾಲೂಕಿನ ಆಲೆಟ್ಟಿ, ಅಜ್ಜಾವರ ಗ್ರಾಮದಲ್ಲಿ ಸಂಜೆಯ ವೇಳೆಗೆ ಸುರಿದ ಮಳೆ ಹಾಗೂ ಬೀಸಿದ ಗಾಳಿಗೆ ಹಾನಿಯಾಗಿರುವ ಬಗ್ಗೆ ವರದಿಯಾಗಿದೆ.ಆಲೆಟ್ಟಿ ಗ್ರಾಮದ ತಲೆಪಳ, ಮೈಂದೂರು, ಭೂತಕಲ್ಲು ಕಟ್ಟೆಕ್ಕಳ ಈ ಭಾಗದಲ್ಲಿ ಬೀಸಿದ ಬಿರುಗಾಳಿಯಿಂದ
ಮರಗಳು ಧರಾಶಾಯಿಯಾಗಿದೆ ಅಡಿಕೆ ,ರಬ್ಬರ್ ಮರಗಳನ್ನು ತುಂಡರಿಸಿದೆ. ತಲೆಪಳ ಎಂಬಲ್ಲಿ ಮನೆಯ ಮೇಲೆ ಮರ ಬಿದ್ದು ಮನೆಗೆ ಹಾನಿಯಾಗಿರುವುದಾಗಿ ತಿಳಿದು ಬಂದಿದೆ. ಸಂಜೆಯ ವೇಳೆಗೆ ಮಳೆಯಾಗಿದ್ದು ಬಿರುಗಾಳಿಯೂ ಬೀಸಿದೆ. ಹಲವು ಅಡಿಕೆ ರಬ್ಬರ್ ಗಿಡಗಳು ನಾಶಗೊಂಡಿವೆ. ಮರಗಳು ರಸ್ತೆಯ ಮೇಲೆ ಬಿದ್ದು ಸಂಚಾರಕ್ಕೆ ಅಡಚಣೆಯಾಗಿದೆ. ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ ವಿದ್ಯುತ್ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ ಎಂದು ತಿಳಿದು ಬಂದಿದೆ.
ಅಜ್ಜಾವರ -ನಾರ್ಕೋಡು ರಸ್ತೆಗೆ ಬೃಹತ್ ಗಾತ್ರದ ಮರ ಬಿದ್ದು ಸಂಚಾರಕ್ಕೆ ತಡೆ ಉಂಟಾಗಿತ್ತು. ಬಳಿಕ ಅರಣ್ಯ ಇಲಾಖೆಯ ಸಿಬ್ಬಂದಿಗಳ ನೇತೃತ್ವದಲ್ಲಿ ರಸ್ತೆಗೆ ಅಡ್ಡಲಾಗಿ ಬಿದ್ದ ಮರವನ್ನು ತೆರವು ಮಾಡಲಾಯಿತು.