ಬಂಟ್ವಾಳ: ಪಾಂಡವರಕಲ್ಲಿನಲ್ಲಿ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆ ನಡೆಯಿತು. ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಮಾತನಾಡಿ, ಕಾಂಗ್ರೆಸ್ ಪಕ್ಷ ಈ ದೇಶಕ್ಕಾಗಿ ಏನು ಮಾಡಿದೆ. ಏನು ಮಾಡಲಿಕ್ಕಿದೆ ಎನ್ನುವ ವಿಚಾರಗಳನ್ನು ಮನೆಮನೆಗೆ ತಲುಪಿಸಿ. ಈಗಾಗಲೇ
ಗ್ಯಾರೆಂಟಿ ಯೋಜನೆ ಎಲ್ಲರಿಗೂ ತಲುಪಿದೆ. ಆದ್ದರಿಂದ ಮತ ಕೇಳುವಾಗ ಎಲ್ಲಾ ಮನೆಗಳಿಗೂ ತೆರಳಿ ಮತ ಕೇಳಿ ಎಂದರು. ಮಾಜಿ ಸಚಿವ ಬಿ. ರಮಾನಾಥ ರೈ, ಬ್ಲಾಕ್ ಅಧ್ಯಕ್ಷ ಬೇಬಿ ಕುಂದರ್, ತುಂಬೆ ಪ್ರಕಾಶ್ ಶೆಟ್ಟಿ, ವಲಯ ಕಾಂಗ್ರೆಸ್ ಅಧ್ಯಕ್ಷ ಪದ್ಮಶೇಖರ್ ಜೈನ್, ಮೋನಪ್ಪ ಪೂಜಾರಿ, ನಾರಾಯಣ ಪೂಜಾರಿ, ಸುಧಾಕರ್ ಶೆಣೈ ಖಂಡಿಗ, ಜಯ ಬಂಗೇರ ಪಾಂಡವರಕಲ್ಲು, ಡೀಕಯ್ಯ ಪೂಜಾರಿ ಕೆಳಗಿನ ಕರ್ಲ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲವಿನಾ ಡಿಸೋಜಾ ಮೊದಲಾದವರು ಉಪಸ್ಥಿತರಿದ್ದರು.