ಸುಳ್ಯ:ಸುಳ್ಯದ ಹಿರಿಯ ಆಯುರ್ವೇದ ಪಂಡಿತ ಹಾಗೂ ಕೋಟೆಕ್ಕಲ್ ಆರ್ಯವೈದ್ಯ ಶಾಲೆಯ ವೈದ್ಯರಾಗಿದ್ದ ಪಿ.ವಿ. ಕುಂಞಿರಾಮನ್ ವೈದ್ಯರ್(ಪಿವಿಕೆಆರ್ ವೈದ್ಯರ್) ರವರು ಅಲ್ಪಕಾಲದ ಅಸೌಖ್ಯದಿಂದ ಎ.1ರಂದು ನಿಧನರಾದರು.ಅವರಿಗೆ (80) ವರ್ಷ ವಯಸ್ಸಾಗಿತ್ತು. ಕಳೆದ 60 ವರ್ಷಗಳಿಂದ ಸುಳ್ಯದಲ್ಲಿ ಕೋಟೆಕಲ್ ಆರ್ಯವೈದ್ಯಶಾಲೆಯ ಔಷಧಿಗಳ ವಿತರಕರಾಗಿದ್ದ ಅವರು ಆಯುರ್ವೇದ ಚಿಕಿತ್ಸೆಯಲ್ಲಿ
ಪರಿಣಿತರಾಗಿದ್ದರು.ಕೆಲವು ಸಮಯಗಳಿಂದ ವಯೋಸಹಜ ಅಸೌಖ್ಯದಿಂದ ಬಳಲಿದ್ದ ಅವರು ಎ.1ರಂದು ರಾತ್ರಿ ನಿಧನರಾಗಿದ್ದಾರೆ. ಸುಳ್ಯದಲ್ಲಿ ಜನಾನುರಾಗಿಯಾಗಿದ್ದ ವೈದ್ಯರ್ ಅವರಿಗೆ ತಮ್ಮ ಚಿಕಿತ್ಸಾ ಸೇವೆಗೆ ಹಲವು ಪ್ರಶಸ್ತಿಗಳು ಲಭಿಸಿದೆ. ವಿವಿಧ ಸಂಘ ಸಂಸ್ಥೆಗಳ ಪ್ರೋತ್ಸಾಹಕರಾಗಿದ್ದ ಅವರು ಸುಳ್ಯದಲ್ಲಿ ಪ್ರೆಂಡ್ಸ್ ಕ್ಲಬ್ ಸ್ಥಾಪಿಸಿ ರಾಜ್ಯ ಮಟ್ಟದ ವಾಲಿಬಾಲ್ ಪಂದ್ಯಾಟವನ್ನು ಸಂಘಟಿಸಿದ್ದರು.
ಮೃತರು, ಪುತ್ರರಾದ ಪ್ರಸನ್ನ ಕುಮಾರ್, ಪ್ರಶಾಂತ್ ಕುಮಾರ್ ,ಪುತ್ರಿ ಪ್ರಸಿತಾ ಸೇರಿದಂತೆ, ಸಹೋದರರು ಹಾಗೂ ಹಲವಾರು ಬಂಧು ಮಿತ್ರರನ್ನು ಅಗಲಿದ್ದಾರೆ.ಸುಳ್ಯ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎಂ.ಮುಸ್ತಫ ಸಂತಾಪ ಸೂಚಿಸಿದ್ದಾರೆ.