ಕಾಣಿಯೂರು:ಪುಣ್ಚತ್ತಾರು ಕರಿಮಜಲು ವಿಷ್ಣುಪುರ ಶ್ರೀ ವಿಷ್ಣುಮೂರ್ತಿ ದೈವಸ್ಥಾನ ಮತ್ತು ಶ್ರೀ ಕಾಳಿಕಾಂಬಾ ದೇವಿ ದೇವಸ್ಥಾನದಲ್ಲಿ ಇಂದಿನಿಂದ ಎ.4ರ ತನಕ ಶ್ರೀ ವಿಷ್ಣುಮೂರ್ತಿ ದೈವದ 56ನೇ ವರ್ಷದ ಒತ್ತೆಕೋಲ ನಡೆಯಲಿದೆ. ಎ.2ರಂದು ಹಸಿರುವಾಣಿ ಸಮರ್ಪಣೆ ನಡೆಯಲಿದೆ. ಹಾಗೂ ಎ.3 ಮತ್ತು 4ರಂದು ಒತ್ತೆಕೋಲ ಸಂಭ್ರಮ ನಡೆಯಲಿದೆ. ಎ.2ರಂದು ಅಪರಾಹ್ನ 3ರಿಂದ ಹಸಿರುವಾಣಿ ಸಮರ್ಪಣೆ ನಡೆಯಲಿದೆ, ವಿವಿಧ ಕಡೆ ಗಳಿಂದ ಮೆರವಣಿಗೆ ಮೂಲಕ ಭಕ್ತರು ಹಸಿರು ಕಾಣಿಕೆ ಸಮರ್ಪಣೆ ಮಾಡಲಿದ್ದಾರೆ .ಎ.3ರಂದು ಬೆಳಿಗ್ಗೆ

ಎಂಟಕ್ಕೆ ಸ್ಥಳ ಶುದ್ದೀಕರಣ ಗಣಹೋಮ ನಡೆಯಲಿದೆ. 5.30ಕ್ಕೆ ವಿಷ್ಣುಪುರ ದೈವಸ್ಥಾನದಿಂದ ಭಂಡಾರ ತೆಗೆಯುವುದು. ಸಂಜೆ 6.30ಕ್ಕೆ ಮೇಲೇರಿಗೆ ಅಗ್ನಿ ಸ್ಪರ್ಶ ನಡೆಯಲಿದೆ. ಸಂಜೆ 7ರಿಂದ ಭಜನಾ ಕಾರ್ಯಕ್ರಮ.ರಾತ್ರಿ 10ರಿಂದ ವಿಷ್ಣುಮೂರ್ತಿ ದೈವದ ಕುಳ್ಚಾಟ ನಡೆಯಲಿದೆ. ರಾತ್ರಿ 11ರಿಂದ ಸಾಯಿಕಲಾ ಯಕ್ಷ ಬಳಗ ಡಾ. ಶಿವರಾಮ ಕಾರಂತ ಬಾಲವನ ಪುತ್ತೂರು ಯಕ್ಷಗಾನ ತಂಡ ಇವರಿಂದ ಯಕ್ಷಗಾನ ಬಯಲಾಟ ‘ಕೊಲ್ಲೂರು ಕ್ಷೇತ್ರ ಮಹಾತ್ಮೆ ನಡೆಯಲಿದೆ’.
ಎ.4ರಂದು ಪ್ರಾತಃಕಾಲ 5ಕ್ಕೆ ಶ್ರೀ ವಿಷ್ಣುಮೂರ್ತಿ ದೈವದ ಅಗ್ನಿ ಪ್ರವೇಶ, ಬೆಳಿಗ್ಗೆ 7.30ಕ್ಕೆ ಮಾರಿಕಳ, ಬೆಳಿಗ್ಗೆ 8ಕ್ಕೆ ಗುಳಿಗ ದೈವದ ಕೋಲ, ಬಳಿಕ ಪ್ರಸಾದ ವಿತರಣೆ, ಹರಕೆ ಒಪ್ಪಿಸುವುದು ನಡೆಯಲಿದೆ. ಎಂದು ಪುಣ್ಚತ್ತಾರು ಕರಿಮಜಲು ವಿಷ್ಣುಪುರ ಶ್ರೀ ವಿಷ್ಣುಮೂರ್ತಿ ದೈವಸ್ಥಾನ ಮತ್ತು ಶ್ರೀ ಕಾಳಿಕಾಂಬಾ ದೇವಿ ದೇವಸ್ಥಾನದ
ಆಡಳಿತ ಮಂಡಳಿಯ ಅಧ್ಯಕ್ಷರಾದ ಡಾ.ದೇವಿಪ್ರಸಾದ್ ಕಾನತ್ತೂರ್ ತಿಳಿಸಿದ್ದಾರೆ.