ಸುಳ್ಯ:ಸುಳ್ಯ ಪ್ರೆಸ್ ಕ್ಲಬ್ನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದ ಅಂಗವಾಗಿ ಪ್ರೆಸ್ ಕ್ಲಬ್ನ ‘ಶಟಲ್ ಬ್ಯಾಡ್ಮಿಂಟನ್ ಕ್ಲಬ್’ನ ಸದಸ್ಯರಿಗಾಗಿ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟವನ್ನು ಏರ್ಪಡಿಸಲಾಯಿತು. ಪುರುಷರ ಡಬಲ್ಸ್ ಪಂದ್ಯಾಟದಲ್ಲಿ ಅನಿಲ್ ಕಳಂಜ- ಈಶ್ವರ ವಾರಣಾಸಿ ತಂಡ ಪ್ರಥಮ ಸ್ಥಾನ ಪಡೆದರೆ, ಗಂಗಾಧರ ಕಲ್ಲಪಳ್ಳಿ- ಪ್ರಶಾಂತ್ ಕೋಟಕ್ಕಲ್ ತಂಡ ದ್ವಿತೀಯ ಸ್ಥಾನ ಪಡೆದರು. ಮಹಿಳೆಯರ ವಿಭಾಗದ
ಸಿಂಗಲ್ಸ್ನಲ್ಲಿ ಜಯಶ್ರೀ ಕೊಯಿಂಗೋಡಿ ಪ್ರಥಮ ಹಾಗೂ ಪ್ರಜ್ಞಾ ಎಸ್.ನಾರಾಯಣ ದ್ವಿತೀಯ ಸ್ಥಾನ ಪಡೆದರು.ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್ನ ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ.ಸಿ.ಪಂದ್ಯಾಟವನ್ನು ಉದ್ಘಾಟಿಸಿದರು.ಪ್ರೆಸ್ ಕ್ಲಬ್ ಗೌರವಾಧ್ಯಕ್ಷ ಹರೀಶ್ ಬಂಟ್ವಾಳ್, ಅಧ್ಯಕ್ಷ ಶರೀಫ್ ಜಟ್ಟಿಪಳ್ಳ,ಸುಳ್ಯ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎಂ.ಮುಸ್ತಫ, ಉದ್ಯಮಿಗಳಾದ ಶಶಿಕಲಾ ಶುಭಕರ ರಾವ್ ಕುಂಭಕ್ಕೋಡು ಮತ್ತಿತರರು

ಇದ್ದರು.ನಗರ ಪಂಚಾಯತ್ ಸದಸ್ಯೆ ಪೂಜಿತಾ ವಿಜೇತರಿಗೆ ಬಹುಮಾನ ವಿತರಿಸಿದರು.ಪ್ರೆಸ್ ಕ್ಲಬ್ ಅಧ್ಯಕ್ಷ ಶರೀಫ್ ಜಟ್ಟಿಪಳ್ಳ, ಕಾರ್ಯದರ್ಶಿ ಗಿರೀಶ್ ಅಡ್ಪಂಗಾಯ, ಜೊತೆ ಕಾರ್ಯದರ್ಶಿ ಹಸೈನಾರ್ ಜಯನಗರ, ಶಿವಪ್ರಸಾದ್ ಕೇರ್ಪಳ ಮತ್ತಿತರರು ಉಪಸ್ಥಿತರಿದ್ದರು.
ಪ್ರೆಸ್ ಕ್ಲಬ್ ಕೋಶಾಧಿಕಾರಿ ಈಶ್ವರ ವಾರಣಾಶಿ ಪಂದ್ಯಾಟದ ಪ್ರಾಯೋಜಕರಾಗಿ ಸಹಕರಿಸಿದರು.