ಸುಳ್ಯ:ಗಾಳಿ ಮಳೆ ಸುರಿಯುತ್ತಿದ್ದಂತೆ ಸುಳ್ಯಕ್ಕೆ ವಿದ್ಯುತ್ ಸರಬರಾಜು ಸ್ಥಗಿತಗೊಂಡಿದೆ. ಮೇ.2ರಂದು ಸಂಜೆ ಸುರಿದ ಭಾರೀ ಮಳೆ ಹಾಗೂ ಬೀಸಿದ ಗಾಳಿ ಮಳೆಗೆ ಸುಳ್ಯಕ್ಕೆ ವಿದ್ಯುತ್ ಸರಬಜಾಗುವ 33 ಕೆವಿ ಲೈನ್ ಮೇಲೆ 3 ಕಡೆ ಉಪ್ಪಳಿಕೆ ಮರ ಬಿದ್ದು ಸುಳ್ಯಕ್ಕೆ
ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಸುಣ್ಣಮೂಲೆ, ಕನಕಮಜಲು, ಅಮ್ಚಿನಡ್ಕದಲ್ಲಿ ವಿದ್ಯುತ್ ಲೈನ್ ಮೇಲೆ ಮರ ಬಿದ್ದಿದೆ. ವಿದ್ಯುತ್ ಕಂಬಗಳಿಗೆ, ಲೈನ್ಗಳಿಗೆ ಹಾನಿ ಉಂಟಾಗಿದೆ. ಆದುದರಿಂದ 33 ಕೆ.ವಿ. ಲೈನ್ ಸಂಪರ್ಕ 9ಗಂಟೆಯ ಬಳಿಕ ಪುನಃ ಸ್ಥಾಪನೆಯಾಗಬಹುದು ಎಂದು ಮೆಸ್ಕಾಂ ಇಂಜಿನಿಯರ್ಗಳು ತಿಳಿಸಿದ್ದಾರೆ. ಅಲ್ಲದೆ ಸುಳ್ಯ ನಗರ ಸೇರಿದಂತೆ ವಿವಿಧ ಕಡೆಗಳಲ್ಲಿ ಮರ ಬಿದ್ದು, ಕಂಬ ಮುರಿದು ವಿದ್ಯುತ್ ಸಂಪರ್ಕ ಜಾಲ ಅಸ್ತವ್ಯಸ್ತಗೊಂಡಿದೆ.
ಆದುದರಿಂದ ವಿವಿಧ ಕಡೆಗಳಲ್ಲಿ ವಿದ್ಯುತ್ ಸರಬರಾಜು ತಡವಾಗಲಿದೆ ಎಂದು ಮೆಸ್ಕಾಂ ಮಾಹಿತಿ ನೀಡಿದೆ.