ಸುಳ್ಯ: ಆನೆಗುಂಡಿ ಸಮೀಪ ಪಂಜಿಗುಂಡಿ ಎಂಬಲ್ಲಿ ಮರ ಬಿದ್ದು
ಸುಳ್ಯದ ವಿದ್ಯುತ್ ಸರಬರಾಜು ಸ್ಥಗಿತಗೊಂಡಿದ್ದು ವಿದ್ಯುತ್ ಸಂಪರ್ಕ ಇನ್ನಷ್ಟು ವಿಳಂಬ ಆಗುವ ಸಾಧ್ಯತೆ ಇದೆ. ಮೆಸ್ಕಾಂ ಇಂಜಿನಿಯರ್ಗಳ ಪ್ರಕಾರ ಮಧ್ಯಾಹ್ನದ ಬಳಿಕವಷ್ಟೇ ವಿದ್ಯುತ್ ಸಂಪರ್ಕ ಸರಿಯಾಗಬಹುದು. ಬುಧವಾರ ಸಂಜೆ
ತಾಲೂಕಿನಾದ್ಯಂತ ಮಳೆ ಸುರಿದಿದ್ದು ರಾತ್ರಿ 9 ಗಂಟೆಯ ವೇಳೆಗೆ ಆನೆಗುಂಡಿ ಸಮೀಪ ಪಂಜಿಗುಂಡಿ ಎಂಬಲ್ಲಿ ಬೃಹತ್ ಗಾತ್ರದ ಮರ ಬಿದ್ದು ಕಂಬಗಳು ಮುರಿದು ಬಿದ್ದಿದೆ, ಲೈನ್ಗಳಿಗೆ ಹಾನಿ ಸಂಭವಿಸಿದೆ. ರಾತ್ರಿ ಇದನ್ನು ಸರಿಪಡಿಸಲಾಗಿಲ್ಲ. ಇಂದು ಬೆಳಿಗ್ಗೆ ಕಂಬ ಬದಲಿಸುವ ಕೆಲಸ ಆರಂಭಿಸಲಾಗಿದ್ದು ವಿದ್ಯುತ್ ಸರಬರಾಜು ತಡವಾಗಲಿದೆ, ಸಂಪರ್ಕ ಮರುಸ್ಥಾಪನೆಯಾಗುವಾಗ ಮಧ್ಯಾಹ್ನ ಆಗಬಹುದು ಎಂದು ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ‘ಸುಳ್ಯ ಮಿರರ್’ಗೆ ತಿಳಿಸಿದ್ದಾರೆ. ಬೃಹತ್ ಮರ ಬಿದ್ದು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ತಡೆಯಾಗಿತ್ತು.ವಿದ್ಯುತ್ ಕಂಬ, ಲೈನ್ಗಳಿಗೆ ಹಾನಿಯಾಗಿದೆ. ಇದರಿಂದ ಸುಳ್ಯದ ಜನತೆ ರಾತ್ರಿ ಪೂರ್ತಿ ಕತ್ತಲಲ್ಲಿ ಕಳೆಯುವಂತಾಗಿದೆ.