ಸುಳ್ಯ: ಮೈನ್ ಲೈನ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿ ಸುಳ್ಯಕ್ಕೆ ವಿದ್ಯುತ್ ಸರಬರಾಜು ಸ್ಥಗಿತಗೊಂಡಿದೆ. ಇದರಿಂದ ತಾಲೂಕು ಕೇಂದ್ರವಾದ ಸುಳ್ಯಕ್ಕೆ
ವಿದ್ಯುತ್ ಸರಬರಾಜು ಸ್ಥಗಿತಗೊಂಡಿದ್ದು ಎಲ್ಲೆಡೆ ಕತ್ತಲು ಆವರಿಸಿದೆ. ಮಾಡಾವು -ಸುಳ್ಯ ಮುಖ್ಯ ಲೈನ್ನಲ್ಲಿ ಸಮಸ್ಯೆ ಇದ್ದ ಕಾರಣ ಇಂದು
ದಿನಪೂರ್ತಿ ಸುಳ್ಯದಲ್ಲಿ ವಿದ್ಯುತ್ ಕಡಿತ ಆಗಿತ್ತು. ಬೆಳಿಗ್ಗೆ 10 ಗಂಟೆಗೆ ಕಡಿತವಾದ ವಿದ್ಯುತ್ ಸಂಜೆಯ ವೇಳೆಗೆ ಒಮ್ಮೆ ಸಂಪರ್ಕ ನೀಡಿದರೂ ಮತ್ತೆ ಕಡಿತಗೊಂಡಿದೆ. ಮೈನ್ ಲೈನ್ ದುರಸ್ತಿ ಕಾರಣದಿಂದ ಮಾಡಾವಿನಿಂದ ಸುಳ್ಯಕ್ಕೆ ವಿದ್ಯುತ್ ಸಂಪರ್ಕ ಕಡಿತಗೊಂಡ ಕಾರಣ ಸುಳ್ಯದಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಂಡಿದೆ. ಮುಖ್ಯ ಲೈನ್ನಲ್ಲಿ ಸಮಸ್ಯೆ ಸರಿಯಾದ ಮೇಲೆ ಸಂಪರ್ಕ ಮರು ಸ್ಥಾಪನೆಯಾಗಲಿದೆ ಮೆಸ್ಕಾಂ ಇಂಜಿನಿಯರ್ಗಳು ತಿಳಿಸಿದ್ದಾರೆ. ವಿದ್ಯುತ್ ಸಂಪರ್ಕ ತಡವಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.