ಸುಳ್ಯ:33 ಕೆ.ವಿ ಕಾವು-ಸುಳ್ಯ ಏಕ ಪಥ ಮಾರ್ಗವನ್ನು ಕೌಡಿಚ್ಚಾರಿನಿಂದ ಕಾವು ಜಂಕ್ಷನ್ ವರೆಗೆ ದ್ವಿಪಥ ಮಾರ್ಗವಾಗಿ ಬದಲಾಯಿಸುವ ಕಾಮಗಾರಿ ಅ.29 ಮಂಗಳವಾರ ನಡೆಸುವುದರಿಂದ ಬೆಳಿಗ್ಗೆ 9:30 ಗಂಟೆಯಿಂದ ಸಂಜೆ 5:00 ಗಂಟೆವರೆಗೆ 33/11 ಕೆ.ವಿ ಕಾವು ಹಾಗೂ
ಸುಳ್ಯ ಉಪಕೇಂದ್ರದಿಂದ ಹೊರಡುವ ಎಲ್ಲಾ 11 ಕೆ.ವಿ ಫೀಡರ್ಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ. ಇದೀಗ ಕಳೆದ ಕೆಲವು ವಾರಗಳಲ್ಲಿ ವಾರದಲ್ಲಿ ಎರಡು ದಿನ ವಿದ್ಯುತ್ ಕಡಿತ ಮಾಡಲಾಗುತ್ತಿದೆ. ಕಳೆದ ಕೆಲವು ವಾರಗಳಲ್ಲಿ ಮಂಗಳವಾರ ಹಾಗೂ ಶನಿವಾರ ದಿನಪೂರ್ತಿ ಕಡಿತ ಆಗುತ್ತದೆ. ಒಂದು ದಿನ 33 ಕೆವಿ ಲೈನ್ ದುರಸ್ತಿಗೆ ಹಾಗೂ ಇನ್ನೊಂದು ದಿನ 11 ಕೆವಿ ನಿಯತಕಾಲಿಕ ನಿರ್ವಹಣೆಗೆಂದು ದಿನಪೂರ್ತಿ ವಿದ್ಯುತ್ ಕಡಿತ ಮಾಡಲಾಗುತ್ತಿದೆ. ಸುಳ್ಯದಲ್ಲಿ ಅಧಿಕೃತವಾಗಿ ಘೋಷಿಸಿ ವಾರದಲ್ಲಿ ಎರಡು ದಿನ ಕಡಿತ ಮಾಡಿದರೆ ಅನಧಿಕೃತವಾಗಿ ಹಲವು ಬಾರಿ ವಿದ್ಯುತ್ ಕಡಿತ ಆಗುತ್ತಿದೆ ಎಂದು ಗ್ರಾಹಕರು ಹೇಳುತ್ತಾರೆ.