ಸುಳ್ಯ: ರಾಜ್ಯದಲ್ಲಿ ಪೆಟ್ರೋಲ್ 3.02 ಹಾಗೂ ಡೀಸೆಲ್ ಬೆಲೆಯಲ್ಲಿ 3 ಹೆಚ್ಚಳವಾಗಿದ್ದು ಸುಳ್ಯದಲ್ಲಿ ಹೊಸ ದರ ಜಾರಿಗೆ ಬಂದಿದೆ. ಸುಳ್ಯದಲ್ಲಿ ಪೆಟ್ರೋಲ್ ದರ ರೂ 102.92ಕ್ಕೆ ಏರಿದೆ. ರೂ 99.89 ಇದ್ದ ದರ 3.03 ಏರಿ 102.92ಕ್ಕೆ ಏರಿದೆ. ಡೀಸೆಲ್ ದರ ರೂ.88.96ಕ್ಕೆ ಏರಿದೆ. 85.95ಕ್ಕೆ ಇದ್ದ ದರ 3.01 ರೂ ಹೆಚ್ಚಳವಾಗಿ 88.96ಕ್ಕೆ ಏರಿದೆ. ವಿವಿಧ ಸ್ಥಳಗಳಲ್ಲಿ
ಪೈಸೆ ಲೆಕ್ಕದಲ್ಲಿ ದರ ವ್ಯತ್ಯಾಸ ಆಗಲಿದೆ. ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ತೆರಿಗೆಯನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಹೆಚ್ಚಳ ಮಾಡಿ ಶನಿವಾರ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಇದರೊಂದಿಗೆ, ಸುದೀರ್ಘ ಸಮಯದ ನಂತರ ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ದುಬಾರಿಯಾಗುತ್ತಿದೆ.ಈ ಹಿಂದೆ ಪೆಟ್ರೋಲ್ ಮೇಲಿನ ಚಿಲ್ಲರೆ ಮಾರಾಟ ತೆರಿಗೆ ಶೇ 25.92 ರಷ್ಟಿತ್ತು. ಈಗ ಶೇ 3.9ರಷ್ಟು ಹೆಚ್ಚಳ ಮಾಡಲಾಗಿದ್ದು, ಶೇ 29.84 ಕ್ಕೆ ಏರಿಕೆಯಾಗಿದೆ. ಡಿಸೇಲ್ ಮೇಲಿನ ಚಿಲ್ಲರೆ ಮಾರಾಟ ತೆರಿಗೆ ಈ ಹಿಂದೆ ಶೇ 14.34 ರಷ್ಟಿತ್ತು. ಈಗ ಶೇ 4.1 ರಷ್ಟು ಹೆಚ್ಚಳ ಮಾಡಲಾಗಿದ್ದು, ಶೇ 18.44 ಕ್ಕೆ ಏರಿಕೆಯಾಗಿದೆ.
ಪೆಟ್ರೋಲ್ ಹಾಗೂ ಡೀಸೆಲ್ ದರ ಹೆಚ್ಚಳ ತಕ್ಷಣದಿಂದಲೇ ಜಾರಿಗೆ ಬರಲಿದೆ ಎಂದು ಶನಿವಾರ (ಜೂನ್ 15) ಹೊರಡಿಸಿರುವ ಸುತ್ತೋಲೆಯಲ್ಲಿ ಸರ್ಕಾರ ಉಲ್ಲೇಖಿಸಿದೆ.