ಪೆರುವಾಜೆ: ಇತಿಹಾಸ ಪ್ರಸಿದ್ಧ ಮಾಗಣೆ ಕ್ಷೇತ್ರ ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯದ ನವರಾತ್ರಿ ಉತ್ಸವ ಅ.10 ರಂದು ಆರಂಭಗೊಂಡಿತು.ಬೆಳಿಗ್ಗೆ ಗಣಪತಿ ಹವನ, ಹುಂಡಿ ಸಮರ್ಪಣೆ ನಡೆದು ನವರಾತ್ರಿಗೆ ಉತ್ಸವಕ್ಕೆ ಚಾಲನೆ ನೀಡಲಾಯಿತು.ಕ್ಷೇತ್ರದ
ಪ್ರಧಾನ ಅರ್ಚಕ ಶ್ರೀನಿವಾಸ ಹೆಬ್ಬಾರ್ ದೀಪ ಬೆಳಗಿಸಿದರು. ಈ ಸಂದರ್ಭದಲ್ಲಿ ಪವಿತ್ರಪಾಣಿ ಸುಬ್ರಹ್ಮಣ್ಯ ನಿಡ್ವಣ್ಣಾಯ, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಸುನಿಲ್ ಕುಮಾರ್ ರೈ ಪೆರುವಾಜೆ ಗುತ್ತು, ಸದಸ್ಯರಾದ ದೀಪಕ್ ಶೆಟ್ಟಿ ಪೆರುವಾಜೆ, ಪ್ರಮೋದ್ ರೈ ಪೆರುವಾಜೆ, ಶೇಷಪ್ಪ ಮಠತಡ್ಕ, ಅಜಯ್ ಶೆಟ್ಟಿ ಪೆರುವಾಜೆ, ಸುಂದರಿ, ಮಾಜಿ ಅಧ್ಯಕ್ಷರಾದ ಪಿ.ಪದ್ಮನಾಭ ಶೆಟ್ಟಿ, ನಿರಂಜನ ಶೆಟ್ಟಿ ಪಾಲ್ತಾಡು, ಮಾಜಿ ಸದಸ್ಯರಾದ ವೆಂಕಟಕೃಷ್ಣ ರಾವ್, ಸರ್ವೇಶ್ ಹೆಬ್ಬಾರ್, ದಿವಾಕರ ರೈ ಕೊಳಂಬಳ, ಕಚೇರಿ ವ್ಯವಸ್ಥಾಪಕ ವಸಂತ ಆಚಾರ್ಯ ಪೆರುವಾಜೆ, ಪೂರ್ಣಲತಾ ಮೊದಲಾದವರಿದ್ದರು.








