ಪೆರುವಾಜೆ: ಪೆರುವಾಜೆ ಶ್ರೀ ಅಯ್ಯಪ್ಪ ಸ್ವಾಮಿ ಭಕ್ತವೃಂದ ಸೇವಾ ಸಮಿತಿಯ ನೂತನ ಸಮಿತಿಯನ್ನು ಅಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಪೆರುವಾಜೆಗುತ್ತು ಸಚಿನ್ ರಾಜ್ ಶೆಟ್ಟಿ ಹಾಗೂ
ಕಾರ್ಯದರ್ಶಿಯಾಗಿ ಚಿದಾನಂದ ರೈ ಆಯ್ಕೆಯಾಗಿದ್ದಾರೆ.ಉಪಾಧ್ಯಕ್ಷರಾಗಿ ಅಜೈ ಶೆಟ್ಟಿ, ಕೋಶಾಧಿಕಾರಿಯಾಗಿ ನಿತಿನ್ ರಾಜ್ ಶೆಟ್ಟಿ ಹಾಗೂ ನಿರ್ದೇಶಕರಾಗಿ ಪ್ರಸಾದ ರೈ ಮರಿಕೇಯಿ, ಕರುಣಾಕರ, ಹೇಮಂತ್ ಗೌಡ ಪೆರುವಾಜೆ ಮತ್ತು ಲಕ್ಷ್ಮಣ ಅವರು ನೂತನ ಸಮಿತಿಯಲ್ಲಿ ಪದಾಧಿಕಾರಿಗಳಾಗಿ ಆಯ್ಕೆಯಾಗಿದ್ದಾರೆ.
ಅಯ್ಯಪ್ಪ ಸ್ವಾಮಿ ಭಕ್ತರ ಹಿತದೃಷ್ಟಿಯಿಂದ ಹಾಗೂ ಧಾರ್ಮಿಕ ಮತ್ತು ಸೇವಾ ಚಟುವಟಿಕೆಗಳನ್ನು ಸಂಘಟಿತವಾಗಿ ನಡೆಸುವ ಉದ್ದೇಶದಿಂದ ಈ ಸೇವಾ ಸಮಿತಿಯನ್ನು ರಚಿಸಲಾಗಿದೆ.








