ಸುಳ್ಯ:ಸುಳ್ಯ ಪೈಚಾರು ಶ್ರೀ ಮಾರಿಯಮ್ಮ ವೀರಭದ್ರ ಸ್ವಾಮಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಪ್ರಯುಕ್ತ ಕ್ಷೇತ್ರಕ್ಕೆ ಹಸಿರುವಾಣಿ ಸಮರ್ಪಣೆ ಎ.21ರಂದು ನಡೆಯಿತು. ಪೈಚಾರು ಜಂಕ್ಷನ್ ನಿಂದ ವಾದ್ಯ, ಘೋಷಗಳೊಂದಿಗೆ ಆರಂಭಗೊಂಡ ಹಸಿರುವಾಣಿ ಮೆರವಣಿಗೆಗೆ ಕುಕ್ಕನ್ನೂರು ಶ್ರೀ ಕಿನ್ನಿಮಾಣಿ ಪೂಮಾಣಿ ದೈವಸ್ಥಾನದ
ಆಡಳಿತ ಮೊಕ್ತೇಸರರಾದ ಬಾಲಕೃಷ್ಣ ನಡುಬೆಟ್ಟು ಚಾಲನೆ ನೀಡಿದರು. ಬಳಿಕ ಮೆರವಣಿಗೆಯಲ್ಲಿ ಸಾಗಿ ಬಂದು ಹಸಿರುವಾಣಿ ಸಮರ್ಪಣೆ ಮಾಡಲಾಯಿತು.ವಿವಿಧ ಕಡೆಗಳಿಂದ ಹಸಿರುವಾಣಿ ಸಮರ್ಪಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಸುಂದರ ರಾವ್, ಕಾರ್ಯಾಧ್ಯಕ್ಷ ದೇವಿಪ್ರಸಾದ್, ಕೋಶಾಧಿಕಾರಿ ಕೇಶವ ಮಾಸ್ತರ್ ಸಿ.ಎ.,ಸಂಚಾಲಕ ರಾಜೇಶ್ ಶೆಟ್ಟಿ, ಸಹ ಸಂಚಾಲಕ ನಾರಾಯಣ ಎಸ್.ಎಂ., ಕಾರ್ಯದರ್ಶಿಗಳಾದ ರಾಘವ ಪೆರಾಜೆ, ಜಗದೀಶ ಎನ್.ಆರ್., ಆಡಳಿತ ಮೊಕ್ತೇಸರರಾದ ಸಂಜೀವ ಪೈಚಾರು, ಅಧ್ಯಕ್ಷ ವೇಣುಗೋಪಾಲ, ಮಧುಸೂದನ್ ಪಿ.ಎಂ., ನಂದರಾಜ ಸಂಕೇಶ, ಸಂಜಯ್ ಪೈಚಾರು, ಸತ್ಯಶಾಂತಿ ತ್ಯಾಗಮೂರ್ತಿ, ಶ್ರೀನಿವಾಸ ಮಾಸ್ತರ್, ಕೆ.ಗೋಕುಲ್ ದಾಸ್ ಹಾಗೂ ವಿವಿಧ ಸಮಿತಿಗಳ ಪದಾಧಿಕಾರಿಗಳು, ಊರವರು ಮೆರವಣಿಗೆಯಲ್ಲಿದ್ದರು.


















