ಬೆಳ್ಳಾರೆ: ಬಿಜೆಪಿ ಮಂಡಲ ಸಮಿತಿ ಹಾಗು ಬಿಜೆಪಿ ಮಂಡಲ ಯುವಮೋರ್ಚಾ ವತಿಯಿಂದ ದಿ.ಪ್ರವೀಣ್ ನೆಟ್ಟಾರು ಸ್ಮೃತಿ ದಿನಾಚರಣೆ ನಡೆಯಿತು. ಪ್ರವೀಣ್ ನೆಟ್ಟಾರು ಅವರ ನಿವಾಸದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕಿ ಭಾಗೀರಥಿ ಮುರುಳ್ಯ, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಸೇರಿ ಪ್ರಮುಖರು ಪ್ರವೀಣ್ ನೆಟ್ಟಾರು ಅವರ

ಪುತ್ಥಳಿಗೆ ಪುಷ್ಪಾರ್ಚನೆ ಮಾಡಿ ನಮನ ಸಲ್ಲಿಸಿದರು. ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ, ಜಿಲ್ಲಾ ಉಪಾಧ್ಯಕ್ಷ ಪ್ರಸನ್ನ ಮಾರ್ತ, ಮಂಡಲ ಉಪಾಧ್ಯಕ್ಷ ಆರ್.ಕೆ.ಭಟ್ ಕುರುಂಬುಡೇಲು, ಕಾರ್ಯದರ್ಶಿ ಶಿವಪ್ರಸಾದ್ ನಡುತೋಟ, ಯುವಮೋರ್ಚಾ ಮಂಡಲ ಅಧ್ಯಕ್ಷ ಶ್ರೀಕಾಂತ್ ಮಾವಿನಕಟ್ಟೆ, ಪ್ರಧಾನ ಕಾರ್ಯದರ್ಶಿ ಪ್ರದೀಪ್ ಕೊಲ್ಲರಮೂಲೆ, ಬೆಳ್ಳಾರೆ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಅಜಿತ್ ಕಿಲಂಗೋಡಿ, ಪ್ರಧಾನ ಕಾರ್ಯದರ್ಶಿ ಅನೂಪ್ ಬಿಳಿಮಲೆ, ಪ್ರಸಾದ್ ಕಾಟೂರು, ಚಂದ್ರಶೇಖರ ಪನ್ನೆ, ಅಶೋಕ್ ಅಡ್ಕಾರ್, ಪ್ರಸನ್ನ ದರ್ಬೆ ಹಾಗು ಪ್ರವೀಣ್ ನೆಟ್ಟಾರು ಕುಟುಂಬಸ್ಥರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ನಿವೃತ್ತ ಸೈನಿಕರನ್ನು ಸನ್ಮಾನಿಸಲಾಯಿತು.








