ಸುಳ್ಯ: ಏ.19 ರಂದು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್ ಪೂಜಾರಿ ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ನಡೆಸಲಿದ್ದಾರೆ. ಪೂ.8.30ರಿಂದ 10.30ರ ತನಕ ಸುಳ್ಯ ಹಳೆಗೇಟಿನಿಂದ ಗಾಂಧಿನಗರ ತನಕ ರೋಡ್ ಶೋ ಮತ್ತು
ಸುಳ್ಯ ಬಸ್ ನಿಲ್ದಾಣದ ಬಳಿಯಲ್ಲಿ ಕಾರ್ನರ್ ಮೀಟಿಂಗ್ ನಡೆಯಲಿದೆ. ಪೂ.11 ಗಂಟೆಗೆ ಸಂಪಾಜೆ ಗ್ರಾಮದ ಕಲ್ಲುಗುಂಡಿಯಲ್ಲಿ ರೋಡ್ ಶೋ ಮತ್ತು ಕಾರ್ನರ್ ಮೀಟಿಂಗ್. 12 ಗಂಟೆಗೆ
ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವರ ದರ್ಶನ ಪಡೆಯುವುದು
12.30ಕ್ಕೆ ತೊಡಿಕಾನ ಗ್ರಾಮದ ಅಡ್ಯಡ್ಕದಲ್ಲಿ ಕಾರ್ನರ್ ಮೀಟಿಂಗ್. 1.30ಕ್ಕೆ ಗುತ್ತಿಗಾರು ಪೇಟೆಯಲ್ಲಿ ಮತಯಾಚನೆ ಮತ್ತು ಕಾರ್ನರ್ ಮೀಟಿಂಗ್, 2.30ಕ್ಕೆ ಹರಿಹರ ಪಳ್ಳತ್ತಡ್ಕದಲ್ಲಿ ಕಾರ್ನರ್ ಮೀಟಿಂಗ್
3.15ಕ್ಕೆ ಕುಕ್ಕೆ ಶ್ರೀ ಸುಬ್ರಹ್ಮಣ್ಯದಲ್ಲಿ ಮತಯಾಚನೆ, ಕುಕ್ಕೇಶ್ರೀ ಸುಬ್ರಹ್ಮಣ್ಯ ದೇವರ
ದರ್ಶನ, ಸುಬ್ರಹ್ಮಣ್ಯ ಮಠದ ಸ್ವಾಮೀಜಿಯವರ ಭೇಟಿ.
4.30ಕ್ಕೆ ಕಡಬ ಪೇಟೆಯಲ್ಲಿ ರೋಡ್ ಶೋ ಬಳಿಕ ಕಾರ್ನರ್ ಮೀಟಿಂಗ್. ಸಂಜೆ 6ಕ್ಕೆ
ಕಾಣಿಯೂರು ಪೇಟೆಯಲ್ಲಿ ಮತ್ತು ಸವಣೂರಿನಲ್ಲಿ ಮತಯಾಚನೆ ಮತ್ತು ಕಾರ್ನರ್ ಮೀಟಿಂಗ್ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.