ಸುಳ್ಯ:ಸುಳ್ಯದ ನೆಹರೂ ಸ್ಮಾರಕ ಮಹಾವಿದ್ಯಾಲಯದಲ್ಲಿ ಉದ್ಯೋಗ ಮೇಳ ‘ಎನ್ಎಂಸಿ ಟ್ಯಾಲೆಂಟ್ ಹೈರ್-2k24’ ಮೇ.28 ರಂದು ಕಾಲೇಜಿನ ಸಭಾಂಗಣದಲ್ಲಿ ಚಾಲನೆ ನೀಡಲಾಯಿತು.ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್ನ ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ.ಸಿ. ಉದ್ಘಾಟಿಸಿದರು.ನೆಹರೂ ಸ್ಮಾರಕ ಮಹಾ ವಿದ್ಯಾಲಯದ ಪ್ರಾಂಶುಪಾಲರಾದ ಪ್ರೊ. ರುದ್ರಕುಮಾರ್ ಎಂ.ಎಂ. ಅಧ್ಯಕ್ಷತೆ ವಹಿಸಿದ್ದರು.ಕಾಲೇಜಿನ
ಶೈಕ್ಷಣಿಕ ಸಲಹೆಗಾರರಾದ ಎಂ.ಬಾಲಚಂದ್ರ ಗೌಡ, ಸ್ಟುಡೆಂಟ್ಸ್ ವೆಲ್ಫೇರ್ ಆಫೀಸರ್ ರತ್ನಾವತಿ ಡಿ, ಐಕ್ಯುಎಸಿ ಆಫೀಸರ್ ಡಾ.ಮಮತ, ಕಾಲೇಜಿನ ಪ್ಲೇಸ್ಮೆಂಟ್ ಆಫೀಸರ್ ಭವ್ಯ.ಜಿ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲ ರುದ್ರಕುಮಾರ್ ಎಂ.ಎಂ ಸ್ವಾಗತಿಸಿ, ಭವ್ಯ ಜಿ ವಂದಿಸಿದರು.ಉದ್ಯೋಗ ಮೇಳವು ಬಿ.ಎ, ಬಿಎಸ್ಸಿ, ಬಿ.ಕಾಂ, ಬಿ.ಬಿ.ಎ, ಬಿ.ಎಸ್.ಡಬ್ಲ್ಯೂ, ಬಿ.ಸಿ.ಎ ಪದವಿ ಪಡೆದ ಅಥವಾ ಅಂತಿಮ ಪದವಿಯಲ್ಲಿರುವ ವಿದ್ಯಾರ್ಥಿಗಳಿಗೆ, ಸ್ನಾತಕೋತ್ತರ ಪದವಿ ಪಡೆದ ಅಥವಾ ಪಿಯುಸಿ ಆದವರನ್ನು ವಿವಿಧ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ನೇಮಿಸಿಕೊಳ್ಳುವ ನಿಟ್ಟಿನಲ್ಲಿ ಏರ್ಪಡಿಸಲಾದ ಉದ್ಯೋಗ ಮೇಳದಲ್ಲಿ ವಿವಿದ ಕಂಪೆನಿಗಳು ಭಾಗವಹಿಸಿವೆ.