ಸುಳ್ಯ:ನಿವೇದಿತಾ ಮಹಿಳಾ ಜಾಗೃತಿ ಸೇವಾ ಟ್ರಸ್ಟ್ ವತಿಯಿಂದ ರಕ್ಷಾ ಬಂಧನ ಆಚರಣೆ ಜಯನಗರ ನಿಸರ್ಗ ಮಸಾಲಾ ಫ್ಯಾಕ್ಟರಿಯಲ್ಲಿ ಆಚರಿಸಲಾಯಿತು.ಫ್ಯಾಕ್ಟರಿಯ ಮಾಲಕರಾದ ಕಸ್ತೂರಿ ಶಂಕರ್ ಮತ್ತು ಉಷಾ ಕಾರ್ಯಕ್ರಮ ಉದ್ಘಾಟಿಸಿದರು. ಅತಿಥಿಗಳಾಗಿದ್ದ
ನಿವೃತ್ತ ಶಿಕ್ಷಕಿ ಚಂದ್ರಮತಿ.ಕೆ ರಕ್ಷಾ ಬಂಧನ ಆಚರಣೆಯ ಮಹತ್ವ ತಿಳಿಸಿದರು.ಆರಕ್ಷಕ ಠಾಣೆಯ ಅಧಿಕಾರಿ ಜ್ಯೋತಿ ಅವರು,ಅಕ್ಕಪಡೆ ಬಗ್ಗೆ ಮಾಹಿತಿ ನೀಡಿದರು. ನಿವೇದಿತ ಟ್ರಸ್ಟ್ ಅಧ್ಯಕ್ಷೆ ಪುಷ್ಪಾ ಮೇದಪ್ಪ ಸ್ವಾಗತಿಸಿದರು. ಗುಣವತಿ ಕೊಲ್ಲಂತಡ್ಕ,ಶಾರದಾ ಶೆಟ್ಟಿ ವೀಣಾ ಮೋಂಟಡ್ಕ, ರಾಜೀವಿ ಪರ್ಲಿಕಜೆ ಇಂದಿರಾ ಶಾಂತಿನಗರ ಹಾಗೂ ಆ ಸಂಸ್ಥೆಯ ಎಲ್ಲಾ ಉದ್ಯೋಗಿಗಳು ಉಪಸ್ಥಿತರಿದ್ದರು ಶಶಿಕಲಾ. ಎ.ಕಾರ್ಯಕ್ರಮ ನಿರೂಪಿಸಿದರು.












