ಸುಳ್ಯ:ಸಾಮರಸ್ಯದ ಸಮಾಜವನ್ನು ಕಟ್ಟಲು ಭಾರತ್ ಜೋಡೋ ಯುವ ಸಂಘಗಳನ್ನು ರಚಿಸಲು ಸರಕಾರ ನಿರ್ಧರಿಸಿದೆ. ಯುವಕ ಯುವಕ, ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ನೋಂದಾಯಿಸಿಕೊಳ್ಳಬೇಕು ಎಂದು ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷರು ಹಾಗು ಭಾರತ್ ಜೋಡೋ ಯುವ ಸಂಘ ರಚನೆಯ ಜಿಲ್ಲಾ ಸಂಚಾಲಕರಾದ ಶುಭಾಶ್ಚಂದ್ರ ಶೆಟ್ಟಿ ಕೊಳ್ನಾಡು ಹೇಳಿದ್ದಾರೆ.
ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು
ರಾಷ್ಟ್ರೀಯ ಐಕ್ಯತೆ, ಸಾಮರಷ್ಯ ಮೂಡಬೇಕು ಎಂಬ ನಿಟ್ಟಿನಲ್ಲಿ ಸಂಘವನ್ನು ರಚಿಸಲಾಗುತ್ತಿದೆ.ಯುವಶಕ್ತಿಯನ್ನು ಕ್ರೀಡೆ, ಸಾಂಸ್ಕೃತಿಕ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವುದು, ನಾಯಕತ್ವ, ಸಮಾಜಸೇವೆಯ ಗುಣಗಳನ್ನು ಬೆಳೆಸುವುದು ಸಂಘದ ಉದ್ದೇಶ. ಗ್ರಾಮ ಪಂಚಾಯತ್ ಮಟ್ಟದಲ್ಲಿ ಸಂಘಕ್ಕೆ ಸೇರ್ಪಡೆಗೆ ಉತ್ತಮ ಸ್ಪಂದನೆ ದೊರಕಿದೆ ಎಂದರು.ಸುಳ್ಯ ತಾಲೂಕಿನ ಗ್ರಾಮ ಪಂಚಾಯತ್ ಮಟ್ಟದಲ್ಲಿ 2,564 ಮಂದಿ ಸೇರ್ಪಡೆಯಾಗಿದ್ದಾರೆ. ನಗರ ಪಂಚಾಯತಗ್ ಮಟ್ಟದಲ್ಲಿ 5 ಸಂಘ ರಚಿಸಬಹುದಾಗಿದ್ದು 302 ಮಂದಿ ಮಾತ್ರ ನೋಂದಾಯಿಸಿದ್ದಾರೆ ಎಂದರು. ಜಿಲ್ಲೆಯಲ್ಲಿ ಗ್ರಾಮೀಣ ಮಟ್ಟದಲ್ಲಿ 23,300 ಗುರಿ ಇದ್ದು
ಈಗಾಗಲೇ 23,787 ಮಂದಿ ನೋಂದಾವಣೆ ಮಾಡಕೊಂಡಿದ್ದಾರೆ ಎಂದರು. ನಗರ ವ್ಯಾಪ್ತಿಯಲ್ಲಿ 12,400 ಗುರಿ ಹೊಂದಿದ್ದು 8,783 ಮಂದಿ ಸೇರ್ಪಡೆ ಆಗಿದೆ. ಹೆಚ್ಚು ಮಂದಿ ಸೇರ್ಪಡೆಗೆ ಉತ್ತೇಜನ ನೀಡಲಾಗುವುದು.ಒಂದು ಸಂಘದಲ್ಲಿ ಕನಿಷ್ಠ 100 ಮಂದಿ ಇರಬೇಕು.16ರಿಂದ 35 ವರ್ಷವರೆಗಿನ 250 ಮಂದಿ ಸೇರ್ಪಡೆಯಾಗಬಹುದು ಎಂದರು. ಅಧ್ಯಕ್ಷರು ಸೇರಿ 15 ಮಂದಿ ಕಾರ್ಯಕಾರಿ ಸಮಿತಿ ರಚಿಸಲಾಗುವುದು. ಸಂಘದ ಚಟುವಟಿಕೆಗಳಿಗೆ ಸರಕಾರ ವಾರ್ಷಿಕ 10 ಲಕ್ಷ ರೂ ಅನುದಾನ ನೀಡಲಿದೆ.
ಕ್ರೀಡೆ, ಆರೋಗ್ಯ ಸ್ವಾಸ್ಥ್ಯ, ಸಮುದಾಯದ ಅಭಿವೃದ್ಧಿ, ರಾಷ್ಟ್ರೀಯ ಹಬ್ಬಗಳ ಆಚರಣೆ,ಸಾಮಾಜಿಕ ಸಾಮರಷ್ಯದ ಕಾರ್ಯಕ್ರಮ, ವಿಪತ್ತು ನಿರ್ವಹಣೆ,ಸೈಬರ್ ಜಾಗೃತಿ, ರಕ್ತದಾನ ಸೇರಿದಂತೆ ಸಾಮರಷ್ಯದ ಸಮಾಜ ಕಟ್ಟುವ ಎಲ್ಲರನ್ನು ಜೋಡಿಸುವ ಕೆಲಸ
ಸಂಘಟನೆಯಿಂದ ಆಗಲಿದೆ. ಜಾತಿ, ಧರ್ಮ, ರಾಜಕೀಯ ಭೇದ ಇಲ್ಲದೆ ಎಲ್ಲಾ ಯುವಕ,ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ನೋಂದಣಿ ಮಾಡಿ ಕೊಳ್ಳುವ ಮೂಲಕ ಯುವಜನಾಂಗ ಈ ಅವಕಾಶವನ್ನು ಬಳಸಿಕೊಳ್ಳಬೇಕು ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು, ಸೂಡ ಅಧ್ಯಕ್ಷ ಕೆ.ಎಂ.ಮುಸ್ತಫ, ಬ್ಲಾಕ್ ಪ್ರಧಾನ ಕಾರ್ಯದರ್ಶಿ ಭವಾನಿಶಂಕರ ಕಲ್ಮಡ್ಕ,ಯುವ ಕಾಂಗ್ರೆಸ್ ಅಧ್ಯಕ್ಷ ಚೇತನ್ ಕಜೆಗದ್ದೆ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯ ರಂಜಿತ್ ರೈ ಮೇನಾಲ, ದಿನೇಶ್ ಮೂಳೂರು, ಸಂತೋಷ್ ಭಂಡಾರಿ, ಎಸ್.ಕೆ.ಹನೀಫ, ಮಂಜುನಾಥ ಮಡ್ತಿಲ ಇದ್ದರು.












