ಸುಳ್ಯ:ಜೇಸಿಐ ಸುಳ್ಯ ಪಯಸ್ವಿನಿ ಇದರ ಜೇಸಿಐ ಸಪ್ತಾಹ ‘ಸುಸ್ನಿಲ’2026 ಅಂಗವಾಗಿ ವ್ಯವಹಾರ ತರಬೇತಿ ಕಾರ್ಯಾಗಾರ
ಸುಳ್ಯದ ಶ್ರೀ ವೆಂಕಟ್ರಮಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಸಭಾಂಗಣದಲ್ಲಿ ನಡೆಯಿತು.ಘಟಕಾಧ್ಯಕ್ಷೆ ಲತಾಶ್ರೀ ಸುಪ್ರೀತ್ ಮೋಂಟಡ್ಕ ಅಧ್ಯಕ್ಷತೆ ವಹಿಸಿದ್ದರು. ಜೇಸಿಐ ಭಾರತ ವಲಯ
15ರ ಪ್ರೊವಿಷನಲ್ ನ್ಯಾಷನಲ್ ಟ್ರೖನರ್ ಜೇಸಿಐ ಸೆನೆಟರ್ ಪೀಟರ್ ಅಂಥೋನಿ ಪಿಂಟೋ ತರಬೇತಿ ಕಾರ್ಯಾಗಾರ ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಜೇಸಿಐ ಭಾರತ ವಲಯ ವಲಯ ಸಂಯೋಜಕರಾದ ವಿಷ್ಣುಪ್ರಕಾಶ್ ನಾರ್ಕೋಡು,
ಜೇಸಿಐ ಸುಳ್ಯ ಪಯಸ್ವಿನಿಯ ಮಾಜಿ ಸದಸ್ಯ ಬಾಲಕೃಷ್ಣ ಎಂ, ಪತ್ರಕರ್ತ ಡಾ. ಯು.ಪಿ ಶಿವಾನಂದ ಭಾಗವಹಿಸಿದ್ದರು. ಮಾಜಿ ಅಧ್ಯಕ್ಷ ನವೀನ್ ಕುಮಾರ್ ಸ್ವಾಗತಿಸಿದರು. ಮಹೇಶ್ ಮೇರ್ಕಜೆ ಅತಿಥಿಗಳನ್ನು ವೇದಿಕೆಗೆ ಅಹ್ವಾನಿಸಿದರು.ಸುನಿತಾ ರವಿಕುಮಾರ್ ಜೇಸಿ ವಾಣಿ ವಾಚಿಸಿದರು. ಕಾರ್ಯದರ್ಶಿ ತಾರಾ ಚೂಂತಾರು ವಂದಿಸಿದರು.












