ಸುಳ್ಯ:ಅಜ್ಜಾವರ ಮೇನಾಲದ ಮುಹಿಯುದ್ದೀನ್ ಜುಮಾ ಮಸೀದಿಯ ನೂರುಲ್ ಇಸ್ಲಾಂ ಮದರಸದ ನೂತನ ಕಟ್ಟಡದ ಉದ್ಘಾಟನಾ ಸಮಾರಂಭವು ಸೆ.3ರಂದು ಅಪರಾಹ್ನ 4.30ಕ್ಕೆ ನಡೆಯಲಿದೆ ಎಂದು ನೂರುಲ್ ಇಸ್ಲಾಂ ಮದರಸ ಕಟ್ಟಡ ನಿರ್ಮಾಣ ಸಮಿತಿ ಹಾಗು ಮುಹಿಯುದ್ದೀನ್ ಜುಮಾ ಮಸೀದಿಯ ಪದಾಧಿಕಾರಿಳು ತಿಳಿಸಿದ್ದಾರೆ.
ಸುಳ್ಯ ಪ್ರೆಸ್ ಕ್ಲಬ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ
ಕಟ್ಟಡ ಸಮಿತಿ ಜೊತೆ ಕಾರ್ಯದರ್ಶಿ ಅಬ್ದುಲ್ ಹಮೀದ್ ಬಯಂಬು ಸುಮಾರು 60 ಲಕ್ಷ ರೂ ವೆಚ್ಚದಲ್ಲಿ ನೂತನ ಮದರಸ ಕಟ್ಟಡವನ್ನು ನಿರ್ಮಾಣ ಮಾಡಲಾಗಿದೆ.ನೂತನ ಕಟ್ಟಡವನ್ನು ಸಮಸ್ತ ಕೇರಳ ಜಂಇಯ್ಯತುಲ್ ಉಲಮ ಅಧ್ಯಕ್ಷರು ಹಾಗು ಎಂಜೆಎಂ ಅಜ್ಜಾವರ ಮೇನಾಲ ಇದರ ಖಾಝಿಯವರಾದ ಸಯ್ಯದ್ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಙಳ್ ಉದ್ಘಾಟಿಸಲಿದ್ದಾರೆ.ಕಟ್ಟಡ ಸಮಿತಿ ಅಧ್ಯಕ್ಷ ಮುಸ್ತಫ ಹಾಜಿ ಡೆಲ್ಮ ಅಧ್ಯಕ್ಷತೆ ವಹಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ

ಸಯ್ಯದ್ ಕೆ.ಎಸ್.ಆಠಕೋಯ ತಂಙಳ್ ಕುಂಬೋಳ್,
ಸಯ್ಯದ್ ಅಹ್ಮದ್ ಪೂಕೋಯ ತಂಙಳ್ ಪುತ್ತೂರು, ಸಯ್ಯದ್ ಎನ್.ಪಿ.ಎಂ ಝೈನುಲ್ ಆಬಿದೀನ್ ತಂಙಳ್ ದುಗ್ಗಲಡ್ಕ,ಯೇನಪೋಯ ಯೂನಿರ್ವಸಿಟಿ ಕುಲಪತಿ ವೈಎಂಕೆ ಅಬ್ದುಲ್ಲ ಕುಂಞಿ, ಎಂಜೆಎಂ ಅಜ್ಜಾವರ ಅಧ್ಯಕ್ಷ ಎ.ಪಿ.ಅಬ್ದುಲ್ಲಕುಂಞಿ, ಹಾಜಿ ಪಳ್ಳಿಕೆರೆ, ಖತೀಬರಾದ ಕೆ.ಎಂ. ಹಸೈನಾರ್ ಫೈಝಿ,ಸುಳ್ಯ ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ ಅಧ್ಯಕ್ಷ ಮುಹಮ್ಮದ್ ನವವಿ ಮುಂಡೋಲೆ, ಇರುವಂಬಳ್ಳಜುಮಾ ಮಸೀದಿ ಖತೀಬರಾದ ಅಶ್ರಫ್ ನಹೀಮಿ, ಮಂಡೆಕೋಲು ಮಸೀದಿಯ ಖತೀಬರಾದ ಶಮೀಮ್ ಅರ್ಷದಿ, ಗುರುವಮೊಟ್ಟೆ ಜುಮಾ ಮಸೀದಿಯ ಖತೀಬರಾದ ಮುಹಮ್ಮದ್ ಶರೀಫ್ ಅಕ್ಸನಿ, ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ. ಶಾಹಿದ್ ತೆಕ್ಕಿಲ್, ಸೂಡ ಅಧ್ಯಕ್ಷ ಕೆ.ಎಂ.ಮುಸ್ತಫ, ನ.ಪಂ.ಮಾಜಿ ಅಧ್ಯಕ್ಷ ಎಸ್. ಸಂಶುದ್ದೀನ್,ಕರ್ನಾಟಕ ಮುಸ್ಲಿಂ ಸಮಾಜದ ಉಪಾಧ್ಯಕ್ಷ ಇಕ್ಬಾಲ್ ಎಲಿಮಲೆ, ಎಂಜೆಎಂ

ಗೌರವಾಧ್ಯಕ್ಷ ಅಬ್ದುಲ್ ಖಾದರ್ ಹಾಜಿ, ಸುಳ್ಯ ತಾಲೂಕು ಸಮಸ್ತ ಅಧ್ಯಕ್ಷ ಅಬ್ದುಲ್ ಖಾದರ್ ಬಾಯಂಬಾಡಿ, ಪ್ರಮುಖರಾದ ಅಬೂಬಕ್ಕರ್ ಮಂಗಳ, ತಾಜ್ ಮಹಮ್ಮದ್ ಸಂಪಾಜೆ, ಮಹಮ್ಮದ್ ಫವಾಝ್, ಹಮೀದ್ ಹಾಜಿ ಸುಳ್ಯ, ಆಲಿ ಹಾಜಿ ಕಲ್ಲುಗುಂಡಿ, ಎ.ಬಿ. ಅಶ್ರಫ್ ಸಹದಿ ಸೇರಿದಂತೆ ಪ್ರಮುಖರು ಭಾಗವಹಿಸಲಿದ್ದಾರೆ ಎಂದು ಅಬ್ದುಲ್ ಹಮೀದ್ ಬಯಂಬು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಕಟ್ಟಡ ಸಮಿತಿ ಅಧ್ಯಕ್ಷ ಮುಸ್ತಫ ಹಾಜಿ ಡೆಲ್ಮ, ಎಂಜೆಎಂ ಅಜ್ಜಾವರ ಅಧ್ಯಕ್ಷ ಎ.ಪಿ.ಅಬ್ದುಲ್ಲಕುಂಞಿ ಹಾಜಿ ಪಳ್ಳಿಕೆರೆ, ಗೌರವಾಧ್ಯಕ್ಷ ಅಬ್ದುಲ್ ಖಾದರ್ ಹಾಜಿ,ಖತೀಬರಾದ ಕೆ.ಎಂ. ಹಸೈನಾರ್ ಫೈಝಿ, ಶಾಫಿ ದಾರಿಮಿ, ಕಟ್ಟಡ ಸಮಿತಿ ಕಾರ್ಯದರ್ಶಿ ಅಬೂಬಕ್ಕರ್ ಹಾಜಿ, ಉಪಾಧ್ಯಕ್ಷರಾದ ಇಬ್ರಾಹಿಂ ಹಾಜಿ ಕೊಳಂಬೆ, ಶರೀಪ್ ರಿಲಾಕ್ಸ್ ಉಪಸ್ಥಿತರಿದ್ದರು.










