ಸುಳ್ಯ: ವಿಶ್ವ ಪ್ರವಾದಿ ಮುಹಮ್ಮದ್ ಮುಸ್ತಫ ಅವರ ಜನ್ಮದಿನಾಚರಣೆಯ ಅಂಗವಾಗಿ ಸೆಪ್ಟೆಂಬರ್ 11 ಶುಕ್ರವಾರ ಸಂಜೆ 4 ಗಂಟೆಗೆ ಸುಳ್ಯದಲ್ಲಿ ಬ್ರಹತ್ ಇಸ್ಲಾಮಿಕ್ ಸಾಂಸ್ಕೃತಿಕ ಕಲಾ ವೈಭವದ ಮೆರವಣಿಗೆ, ಇಷ್ಕೆ ಮದೀನಾ ಕಾರ್ಯಕ್ರಮ ನಡೆಸಲು ನಿರ್ದಾರಿಸಲಾಗಿದೆ.
ಪ್ರತೀ ವರ್ಷದಂತೆ ಈ ವರ್ಷವು ತಾಲೂಕು ಮಿಲಾದ್ ಸಮಿತಿ ವತಿಯಿಂದ
ವಿಜೃಂಭಣೆಯ ಈದ್ ಮಿಲಾದ್ ಆಚರಿಸುವ ಸಲುವಾಗಿ ಸಮಿತಿ ಯನ್ನು ರಚಿಸಲಾಗಿದೆ.ಗಾಂಧಿನಗರ ಜಿಟಿಸಿ ಮೆಟ್ರೋ ಬನಾತ್ ಟವರ್ನಲ್ಲಿ ಸಮಿತಿಯ ಕಚೇರಿಯನ್ನು ಉದ್ಘಾಟಿಸಲಾಯಿತು.ಸುಳ್ಯ ನಗರಾಭಿವೃದ್ಧಿ ಯೋಜನಾ ಪ್ರಾಧಿಕಾರ ಅಧ್ಯಕ್ಷ ಕೆ. ಎಂ. ಮುಸ್ತಫ ಕಚೇರಿ ಉದ್ಘಾಟಿಸಿ ಶುಭ ಹಾರೈಸಿದರು.ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಷನ್ ಅಧ್ಯಕ್ಷ ಕೆ. ಬಿ. ಇಬ್ರಾಹಿಂ ಪೋಸ್ಟರ್ ಬಿಡುಗಡೆ ಮಾಡಿದರು.
ಉದ್ಯಮಿ ಫೈಝಲ್ ಕಟ್ಟೆಕ್ಕಾರ್ಸ್ ಸ್ಕ್ಯಾನರ್ ಚಾಲನೆ ನೀಡಿದರು, ಅನ್ಸಾರ್ ಕಾರ್ಯದರ್ಶಿ ಬಷೀರ್ ಸಪ್ನಾ ಉಪಸ್ಥಿತರಿದ್ದರು.
ತಾಲೂಕು ಮೀಲಾದ್ ಸಮಿತಿ ಅಧ್ಯಕ್ಷ ಮುನಾಫರ್ ನಾವೂರು ಅಧ್ಯಕ್ಷತೆ ವಹಿಸಿದ್ದರ. ಪದಾಧಿಕಾರಿಗಳಾದ ಕೆ.ಎಸ್.ಉಮ್ಮರ್,ಶರೀಫ್ ಕಂಠಿ, ಮನ್ಸೂರ್ ಮೆಟ್ರೋ,ಇಕ್ಬಾಲ್ ಸುಣ್ಣಮೂಲೆ, ಖಲಂದರ್ ಎಲಿಮಲೆ, ಅಬ್ದುಲ್ ಕಲಾಂ ಬೀಜಕೊಚ್ಚಿ,ರಶೀದ್ ಜಟ್ಟಿಪ್ಪಳ್ಳ,ನವಾಜ್ ಪಂಡಿತ್ ಜಯನಗರ, ರಶೀದ್ ಅಡ್ವೋಕೇಟ್, ಅಚ್ರು ಕಲ್ಲುಮುಟ್ಲು, ಮುಸ್ತಫಾ ಪಂಡಿತ್ ಮೊದಲಾದವರು ಉಪಸ್ಥಿತರಿದ್ದರು.ಉನೈಸ್ ಪೆರಾಜೆ ಸ್ವಾಗತಿಸಿ ವಂದಿಸಿದರು












