ಸುಳ್ಯ:ಭಾರತೀಯ ತೀಯ ಸಮಾಜ ಸುಳ್ಯ ವಲಯ ಸಮಿತಿ, ನಗರ ಸಮಿತಿ ಹಾಗೂ ವಿವಿಧ ಗ್ರಾಮ ಸಮಿತಿಗಳ ಸಂಯುಕ್ತ ಆಶ್ರಯದಲ್ಲಿ 5ನೇ ವರ್ಷದ ಓಣಂ ಆಚರಣೆ ಕೇರ್ಪಳದ ಬಂಟರ ಭವನದಲ್ಲಿ ನಡೆಯಿತು. ಶ್ರೀ ವಯನಾಟ್ ಕುಲವನ್ ದೈವದ ದರ್ಶನಕಾರರಾದ ಶಿವರಾಮ ಅರಂತೋಡು ದೀಪ ಬೆಳಗಿಸಿ, ಹಿಂಗಾರ ಅರಳಿಸುವ ಮೂಲಕ ಓಣಂ ಆಚರಣೆಗೆ ಚಾಲನೆ ನೀಡಿದರು.ಭಾರತೀಯ
ತೀಯ ಸಮಾಜ ಸುಳ್ಯ ವಲಯ ಸಮಿತಿ ಅಧ್ಯಕ್ಷ ಹರಿಶ್ಚಂದ್ರ ಕೇಪುಳಕಜೆ ಅಧ್ಯಕ್ಷತೆ ವಹಿಸಿದ್ದರು.ದೇವಚಳ್ಳ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅಜಿತ್.ಜಿ.ಕೆ, ಹಿರಿಯ ಆರೋಗ್ಯ ಸುರಕ್ಷಾ ಅಧಿಕಾರಿ ಲೀಲಾವತಿ ಅಡ್ಕಾರು ಅತಿಥಿಗಳಾಗಿದ್ದರು. ವಲಯ ಸಮಿತಿ ಪ್ರಧಾನ ಕಾರ್ಯದರ್ಶಿ ಭಾಸ್ಕರ ಅಡ್ಕಾರು, ಕೋಶಾಧಿಕಾರಿ ಪ್ರದೀಪ್ ಅರಂತೋಡು ಉಪಸ್ಥಿತರಿದ್ದರು. ವಲಯ ಸಮಿತಿಯ

ಜೊತೆ ಕಾರ್ಯದರ್ಶಿ ರಜನಿ ಗೋರಡ್ಕ ಸ್ವಾಗತಿಸಿ, ವಲಯ ಸಮಿತಿ ಸದಸ್ಯೆ ಭವಾನಿ ಚಿಟ್ಟನ್ನೂರು ವಂದಿಸಿದರು.
ಭಾಸ್ಕರ ಅಡ್ಕಾರು ಮತ್ತು ವಿಜಯಲಕ್ಷ್ಮಿ ಕಾರ್ಯಕ್ರಮ ನಿರೂಪಿಸಿದರು. ಬಳಿಕ ವಿವಿಧ ಸ್ಪರ್ಧೆಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಪೂಕಳಂ, ಹಗ್ಗ ಜಗ್ಗಾಟ, ಮಡಕೆ ಒಡೆಯುವ ಸ್ಪರ್ಧೆ, ಮಕ್ಕಳಿಗೆ ಹಾಗು ಹಿರಿಯರಿಗೆ ವಿವಿಧ ಸ್ಪರ್ಧೆಗಳು ನಡೆಯಿತು. ಸಾಂಸ್ಕೃತಿಕ ಕಾರ್ಯಕ್ರಮ, ಓಣಂ ಸದ್ಯ ಏರ್ಪಡಿಸಲಾಗಿತ್ತು.










