ಸುಳ್ಯ:ಸುಳ್ಯ ಶ್ರೀ ಶಾರದಾಂಬ ದಸರಾ ಸೇವಾ ಟ್ರಸ್ಟ್, ಸಾರ್ವಜನಿಕ ಶ್ರೀ ಶಾರದಾಂಬ ಸೇವಾ ಸಮಿತಿ, ದಸರಾ ಉತ್ಸವ ಸಮಿತಿ, ಶಾರದಾಂಬ ಉತ್ಸವ ಸಮಿತಿ ಇದರ ಜಂಟಿ ಆಶ್ರಯದಲ್ಲಿ ನಡೆಯುತ್ತಿರುವ 55ನೇ ವರ್ಷದ ಶಾರದೋತ್ಸವ ಸುಳ್ಯ ದಸರಾ ಉತ್ಸವದ ಅಂಗವಾಗಿ ಸಂಭ್ರಮದ ಮಕ್ಕಳ ದಸರಾ ನಡೆಯಿತು.ಮಕ್ಕಳಿಗಾಗಿ
ವಿವಿಧ ಸ್ಪರ್ಧೆಗಳು, ಮನರಂಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು.ಶಾರದಾಂಬ ಮಹಿಳಾ ಸಮಿತಿ ಅಧ್ಯಕ್ಷೆ ಲತಾ ಮಧುಸೂದನ್ ಉದ್ಘಾಟಿಸಿದರು.
ಶ್ರೀ ಶಾರದಾಂಬಾ ಸೇವಾ ಸಮಿತಿಯ ಅಧ್ಯಕ್ಷ ನಾರಾಯಣ ಕೇಕಡ್ಕ, ಗೌರವಾಧ್ಯಕ್ಷ ಗೋಕುಲ್ ದಾಸ್ ಸುಳ್ಯ, ರಂಗಮಯೂರಿ ಕಲಾ ಶಾಲೆಯ ಸಂಚಾಲಕ ಲೋಕೇಶ್ ಊರುಬೈಲು, ಪತ್ರಕರ್ತ ಶಿವಪ್ರಸಾದ್ ಆಲೆಟ್ಟಿ,ಸ್ನೇಹ ಶಿಕ್ಷಣ ಸಂಸ್ಥೆ ಮುಖ್ಯ ಶಿಕ್ಷಕ ದೇವಿಪ್ರಸಾದ್ ಕಾಯರ್ತೋಡಿ, ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಉದ್ಯೋಗಿ ಬಾಲಕೃಷ್ಣ ಮೇನಾಲ, ಕೆ.ವಿ.ಜಿ ಉದ್ಯೋಗಿ ಶಶಿಕಾಂತ್ ಮಿತ್ತೂರು ಹಾಗೂ ಮಕ್ಕಳು ಉಪಸ್ಥಿತರಿದ್ದರು.
ಶಶಿಕಾಂತ್ ಮಿತ್ತೂರು ಕಾರ್ಯಕ್ರಮ ನಿರ್ವಹಿಸಿದರು. ಬಳಿಕ ಮಕ್ಕಳ ಭಕ್ತಿ ಗೀತೆ, ಜಾನಪದ ಗೀತೆ ಸ್ಪರ್ಧೆ, ರಂಗೋಲಿ ಸ್ಪರ್ಧೆ, ಕ್ರಾಫ್ಟ್ ಸ್ಪರ್ಧೆಯು ನಡೆಯಿತು.ರಂಗಮಯೂರಿ ಕಲಾ ಶಾಲೆಯ ಪೋಷಕ ಕಮಿಟಿ ಸದಸ್ಯರು ಮತ್ತು ಶಾರದಾಂಬ ಉತ್ಸವ ಸಮಿತಿಯ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.










