ಸುಳ್ಯ:ಸುಳ್ಯ ಶ್ರೀ ಶಾರದಾಂಬ ದಸರಾ ಸೇವಾ ಟ್ರಸ್ಟ್, ಸಾರ್ವಜನಿಕ ಶ್ರೀ ಶಾರದಾಂಬ ಸೇವಾ ಸಮಿತಿ, ದಸರಾ ಉತ್ಸವ ಸಮಿತಿ, ಶಾರದಾಂಬ ಉತ್ಸವ ಸಮಿತಿ ಇದರ ಜಂಟಿ ಆಶ್ರಯದಲ್ಲಿ ನಡೆಯುತ್ತಿರುವ 55 ನೇ ವರ್ಷದ ಶಾರದಾಂಬ ಉತ್ಸವ ಸುಳ್ಯ ದಸರಾದ ಶಾರದಾಂಬ ಕಲಾ ವೇದಿಕೆಯಲ್ಲಿ ಪ್ರತಿ ದಿನ ನಡೆಯುತ್ತಿರುವ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರೇಕ್ಷಕರನ್ನು ಸೆಳೆಯುತಿದೆ. ದಸರಾ ಅಂಗವಾಗಿ ಅ.19ರಂದು
ಸಂಜೆ ನಡೆದ ಸಾಂಸ್ಕೃತಿಕ ವೈವಿಧ್ಯ ಕಾರ್ಯಕ್ರಮಗಳು ಪ್ರೇಕ್ಷಕರ ಮನ ಗೆದ್ದಿತು. ಉಗ್ರ ನರಸಿಂಹ, ಶಿವ ತಾಂಡವ, ಇಮ್ಮಡಿ ಪುಲಿಕೇಶಿ ವಿಜಯ ಮೊದಲಾದ ನೃತ್ಯ ರೂಪಕಗಳು ನೋಡುಗರ ಮೈ ನವಿರೇಳಿಸಿತು. ಜೊತೆಗೆ ರಾಪ್ ನೃತ್ಯ, ಸಿನಿಮಾಟಿಕ್ ಡಾನ್ಸ್, ಸೆಮಿ ಕ್ಲಾಸಿಕಲ್ ಡಾನ್ಸ್, ಹಾಡುಗಳು ಪ್ರೇಕ್ಷಕರಿಗೆ ರಸದೌತಣ ಉಣಬಡಿಸಿತು. ಸುಮಾರು

ಮೂರುವರೆ ಗಂಟೆಗಳ ಕಾಲ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ಹಿಸತೊಂದು ಸಾಂಸ್ಕೃತಿಕ ಕಲಾ ಲೋಕ ಅನಾವರಣಗೊಳಿಸಿತು. ರಂಗಮಯೂರಿ ಕಲಾ ಶಾಲೆಯ ಸಂಚಾಲಕ ಲೋಕೇಶ್ ಊರುಬೈಲು ನಿರ್ದೇಶನದಲ್ಲಿ ಮೂಡಿಬಂದ ಕಾರ್ಯಕ್ರಮಗಳು ತುಂಬಿದ ಪ್ರೇಕ್ಷಕರಿಗೆ ಲಾ ಸಾಂಸ್ಕೃತಿಕ ರಸದೌತಣ ಉಣಬಡಿಸಿತು.












