ಮುಂಬೈ:ನಾಸಾದ ವತಿಯಿಂದ ಆಯೋಜಿಸಲಾಗುವ ಕಾನ್ಫರೆನ್ಸ್ನಲ್ಲಿ ಭಾಗವಹಿಸಲು ಖ್ಯಾತ ಪರಿಸರ ತಜ್ಞ, ಗ್ರೀನ್ ಹೀರೋ ಆಫ್ ಇಂಡಿಯಾ ಡಾ.ಆರ್.ಕೆ.ನಾಯರ್ ಆಯ್ಕೆಯಾಗಿದ್ದಾರೆ. ನಾಸಾ ಏರ್ಪಡಿಸಿದ ಕಾನ್ಫರೆನ್ಸ್ನಲ್ಲಿ ವಿಶ್ವದ ವಿವಿಧ ಭಾಗಗಳ ವಿಜ್ಞಾನಿಗಳು ಹಾಗೂ ತಜ್ಞರು ಭಾಗವಹಿಸುತ್ತಿದ್ದಾರೆ. ಜಾಗತಿಕ ತಾಪಮಾನದ ಬಗ್ಗೆ ನಡೆಯುವ
ಕಾನ್ಫರೆನ್ಸ್ನಲ್ಲಿ ಜಾಗತಿಕ ತಾಪಮಾನ ನಿಯಂತ್ರಣದಲ್ಲಿ ಮಿಯಾವಾಕಿ ಅರಣ್ಯದ ಪಾತ್ರದ ಬಗ್ಗೆ ಚರ್ಚೆ ನಡೆಯಲಿದೆ. ಮಿಯಾವಾಕಿ ಮಾದರಿಯ ಅರಣ್ಯ ಬೆಳೆಸುವುದರಿಂದ ಭೂಮಿಗೆ, ಜೀವರಾಶಿಗಳಿಗೆ ಮತ್ತು ಮುಂದಿನ ಜನಾಂಗಕ್ಕೆ ಆಗುವ ಪ್ರಯೋಜನಗಳ ಕುರಿತು ಡಾ.ಆರ್.ಕೆ.ನಾಯರ್ ಮಾತನಾಡಲಿದ್ದಾರೆ. ಮಿಯಾವಾಕಿ ಮಾದರಿಯಲ್ಲಿ ಅರಣ್ಯೀಕರಣ ನಡೆಸುವ ತಮ್ಮ ಅನುಭವಗಳ ಬಗ್ಗೆಯೂ ಅವರು ಮಾತನಾಡಲಿದ್ದಾರೆ. ಮಿಯಾವಾಕಿ ಅರಣ್ಯದ ಬಗ್ಗೆ ನಾಸಾ ನಡೆಸುವ ಸರ್ವೆಯ ಭಾಗವಾಗಿ ಕಾನ್ಫರೆನ್ಸ್ ಏರ್ಪಡಿಸಲಾಗಿದೆ. ಡಿ.5ರಂದು ಕಾನ್ಸಫರೆನ್ಸ್ ನಡೆಯಲಿದೆ. ವರ್ಚುವಲ್ ಆಗಿ ಕಾನ್ಪರೆನ್ಸ್ ನಡೆಯಲಿದೆ. ಡಿ.5ರಂದು ರಾತ್ರಿ 8.30ರಿಂದ ವೀಡಿಯೋ ಕಾನ್ಫರೆನ್ಸ್ ಏರ್ಪಡಿಸಲಾಗಿದೆ. ಗುಜರಾತ್ನಲ್ಲಿ ಉದ್ಯಮಿಯಾಗಿರುವ ಡಾ.ಆರ್.ಕೆ.ನಾಯರ್ ಸುಳ್ಯ ಜಾಲ್ಸೂರಿನವರು. ಮಿಯಾವಾಕಿ ಮಾದರಿಯಲ್ಲಿ 112 ಮಿಯಾವಾಕಿ ಅರಣ್ಯ ಬೆಳೆಸಿರುವ ಡಾ.ಆರ್.ಕೆ.ನಾಯರ್ 20 ಲಕ್ಷಕ್ಕೂ ಹೆಚ್ಚು ಗಿಡಗಳನ್ನು ಬೆಳೆಸಿದ್ದಾರೆ.
















