ಸುಳ್ಯ:ಅಟಲ್ ಜೀ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಅಂಬೆಟಡ್ಕದ ನೂತನ ಸಂಕೀರ್ಣ ‘ನರೇಂದ್ರ ವಿಹಾರ’ದಲ್ಲಿ ನಾಮಫಲಕ ಅನಾವರಣ ಮತ್ತು ಸ್ನೇಹಮಿಲನ ಕಾರ್ಯಕ್ರಮ ಜು.8 ರಂದು ನಡೆಯಿತು. ಶಾಸಕಿ ಭಾಗೀರಥಿ ಮುರುಳ್ಯ, ಪಕ್ಷದ ಹಿರಿಯರಾದ ರಾಮಯ್ಯ ಭಟ್ ಪಂಜ, ರಾಧಾಕೃಷ್ಣ ಕೋಟೆ, ಪಿ.ಕೆ.ಉಮೇಶ್, ಬಯಂಬು ಭಾಸ್ಕರ ರಾವ್ ಸೇರಿ ನಾಮಫಲಕ ಅನಾವರಣ ಮಾಡಿದರು. ಬಳಿಕ ನಡೆದ ಸಮಾರಂಭದ
ಅಧ್ಯಕ್ಷತೆಯನ್ನು ಅಟಲ್ಜಿ ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷರಾದ ಹರೀಶ್ ಕಂಜಿಪಿಲಿ ವಹಿಸಿದ್ದರು. ಶಾಸಕಿ ಭಾಗೀರಥಿ ಮುರುಳ್ಯ, ಹಿರಿಯರಾದ ಪಕ್ಷದ ಹಿರಿಯರಾದ ರಾಮಯ್ಯ ಭಟ್ ಪಂಜ, ರಾಧಾಕೃಷ್ಣ ಕೋಟೆ, ಪಿ.ಕೆ.ಉಮೇಶ್, ಬಯಂಬು ಭಾಸ್ಕರ ರಾವ್, ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ, ಅಟಲ್ಜಿ ಸೇವಾ ಟ್ರಸ್ಟ್ಗೆ ರಿಯಾಯಿತಿ ದರದಲ್ಲಿ ನಿವೇಶನ ನೀಡಿದ ಮಧುಸೂದನ ಕುಂಭಕ್ಕೋಡು, ಲತಾ ಮಧುಸೂದನ ಅತಿಥಿಗಳಾಗಿದ್ದರು.
ಅಟಲ್ಜಿ ಚಾರಿಟೇಬಲ್ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಸುಬೋದ್ ಶೆಟ್ಟಿ, ಕೋಶಾಧಿಕಾರಿ ಎ.ವಿ.ತೀರ್ಥರಾಮ
ಟ್ರಸ್ಟ್ನ ಪ್ರಸದಸ್ಯರಾದ ಎಸ್.ಎನ್.ಮನ್ಮಥ, ವೆಂಕಟ್ ದಂಬೆಕೋಡಿ, ಸುಧಾಕರ ಕಾಮತ್, ರಾಕೇಶ್ ರೈ ಕೆಡೆಂಜಿ, ಮುಳಿಯ ಕೇಶವ ಭಟ್, ಕೃಷ್ಣ ಶೆಟ್ಟಿ ಕಡಬ, ಬಿಜೆಪಿ ಮಂಡಲ ಸಮಿತಿ ಪ್ರಧಾನ ಕಾರ್ಯದರ್ಶಿಗಳಾದ ವಿನಯಕುಮಾರ್ ಕಂದಡ್ಕ, ಪ್ರದೀಪ್ ರೈ ಮನವಳಿಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಧುಸೂದನ ಕುಂಭಕ್ಕೋಡು, ಲತಾ ಮಧುಸೂದನ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು.
ಟ್ರಸ್ಟ್ನ ಕೋಶಾಧಿಕಾರಿ ಎ.ವಿ.ತೀರ್ಥರಾಮ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಸುಬೋದ್ ಶೆಟ್ಟಿ ಮೇನಾಲ ವಂದಿಸಿದರು.
ರಾಕೇಶ್ ರೈ ಕೆಡೆಂಜಿ ಕಾರ್ಯಕ್ರಮ ನಿರೂಪಿಸಿದರು.
ಸಾರ್ವಜನಿಕರ, ಸಂಘಟನೆಗಳ ಪ್ರಮುಖರ, ಕಾರ್ಯಕರ್ತರ ಸಹಕಾರದಿಂದ ಭವಿಷ್ಯದ ದಿನಗಳಲ್ಲಿ ಸಂಘಟನೆಗಳ ಚಟುವಟಿಕೆಗಳಿಗೆ ಪೂರಕವಾಗುವ ನಿಟ್ಟಿನಲ್ಲಿ 0.28 ಎಕ್ರೆ ನಿವೇಶನ ಪಡೆದು ಅಟಲ್ ಜೀ ಚಾರಿಟೇಬಲ್ ಟ್ರಸ್ಟ್ ರಿ ಸುಳ್ಯ ಹೆಸರಿನಲ್ಲಿ ನೋದಾಯಿಸಲ್ಪಟ್ಟಿದೆ. ನವೀಕರಣಗೊಂಡ ಕಟ್ಟಡದ ಒಂದು ಭಾಗದಲ್ಲಿ ಬಿಜೆಪಿ ಮಂಡಲ ಕಚೇರಿ ಉದ್ಘಾಟನೆಗೊಂಡಿದೆ ಎಂದು ಅಟಲ್ ಜೀ ಚಾರಿಟೇಬಲ್ ಟ್ರಸ್ಟ್ನ ಪದಾಧಿಕಾರಿಗಳು ತಿಳಿಸಿದರು.