ದಂಬುಲಾ: ಋತುರಾಜ್ ಗಾಯಕವಾಡ್ ಅವರ ಅಮೋಘ ಶತಕದ ಬಲದಿಂದ ಭಾರತ ಎ ತಂಡವು ಮಂಗಳವಾರ ಆರಂಭವಾದ ತ್ರಿಕೋನ ಏಕದಿನ ಕ್ರಿಕೆಟ್ ಸರಣಿಯಲ್ಲಿ ಶುಭಾರಂಭ ಮಾಡಿತು. ಮೊದಲ ಪಂದ್ಯದಲ್ಲಿ ಭಾರತ ಎ ತಂಡವು 8 ರನ್ಗಳಿಂದ ಶ್ರೀಲಂಕಾ ಎ ವಿರುದ್ಧ ಗೆದ್ದಿತು.ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ
ಭಾರತ ಎ ತಂಡದ ಪ್ರಮುಖ ಆಕರ್ಷಣೆ 15ರ ಪೋರ ವೈಭವ್ ಸೂರ್ಯವಂಶಿ ಅವರು 14 ರನ್ ಗಳಿಸಿದರು. ಆದರೆ ಋತುರಾಜ್ (101; 114ಎ, 4X6, 6X3) ಮತ್ತು ಅರ್ಧಶತಕ ಗಳಿಸಿದ ತಿಲಕ್ ವರ್ಮಾ (60; 97ಎ, 4X2, 6X1) ಅವರ ಅಮೋಘ ಅಟದಿಂದಾಗಿ ಭಾರತ ಎ ತಂಡವು 50 ಓವರ್ಗಳಲ್ಲಿ 6 ವಿಕೆಟ್ಗಳಿಗೆ 277 ರನ್ ಗಳಿಸಿತು. ಅದಕ್ಕುತ್ತರವಾಗಿ ಶ್ರೀಲಂಕಾ ಎ ತಂಡವು 48.5 ಓವರ್ಗಳಲ್ಲಿ 269 ರನ್ ಗಳಿಸಿ ಸೋತಿತು. ಅರ್ಷದ್ ಖಾನ್, ಅನುಕೂಲ್ ರಾಯ್, ಆಯುಷ್ ಬಡೋನಿ ಮತ್ತು ವಿಪ್ರಜ್ ನಿಗಮ್ ಅವರು ತಲಾ ಎರಡು ವಿಕೆಟ್ ಗಳಿಸಿದರು. ಆತಿಥೇಯ ತಂಡದ ನಾಯಕ ಸಹನ್ ಅರ್ಚಾಚಿಗೆ (74; 72ಎ, 4X6, 6X2) ಅರ್ಧಶತಕ ಗಳಿಸಿದರು.













