ಸುಳ್ಯ:ನವರಾತ್ರಿ ಹಬ್ಬದ ಪ್ರಯುಕ್ತ ಅಂಜಲಿ ಮೊಂಟೇಸ್ಸೂರಿ ಸ್ಕೂಲ್ನಲ್ಲಿ ನಡೆಯುತ್ತಿರುವ ಗೊಂಬೆ ಹಬ್ಬಕ್ಕೆ ಕಾರ್ಮಿಕರ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ. ಶಹೀದ್ ತೆಕ್ಕಿಲ್ ಹಾಗೂ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರು ಹಾಗೂ

ಅಂಜಲಿ ಮೊಂಟೇಸ್ಸೂರಿ ಸ್ಕೂಲ್ನ ಟ್ರಸ್ಟಿಗಳಾದ ಸದಾನಂದ ಮಾವಜಿ ಭೇಟಿ ನೀಡಿ ಗೊಂಬೆ ಹಬ್ಬ ವೀಕ್ಷಿಸಿ ಪೂಜೆಯಲ್ಲಿ ಭಾಗಿಯಾಗಿ ಶುಭ ಹಾರೈಸಿದರು. ಈ ಸಂದ ರ್ಭದಲ್ಲಿ ಕರ್ನಾಟಕ ರಾಜ್ಯ ಕಾರ್ಮಿಕರ ಕನಿಷ್ಠ ವೇತನ ಸಲಹಾ ಮಂಡಳಿಯ ಅಧ್ಯಕ್ಷರಾಗಿ ಆಯ್ಕೆಯಾದ ಟಿ. ಎಂ. ಶಹೀದ್ ಅವರನ್ನು ಶಾಲೆಯ ಪರವಾಗಿ ಕರ್ನಾಟಕ ಅರೆಭಾಷೆ ಸಂಸ್ಕೃತಿ ಹಾಗೂ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಸದಾನಂದ ಮಾವಜಿ ಹಾಗೂ ಶಾಲೆಯ ಸಂಚಾಲಕಿ ಗೀತಾಂಜಲಿ ಸನ್ಮಾನಿಸಿ ಗೌರವಿಸಿದರು.











