ಸುಳ್ಯ;ವಿಧಾನ ಪರಿಷತ್ ನೈರುತ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣೆ ಜೂ.3 ರಂದು ನಡೆಯಿತು. ಸುಳ್ಯ ತಾಲೂಕಿನಲ್ಲಿ ಪದವೀಧರ ಕ್ಷೇತ್ರದಲ್ಲಿ ಶೇ.78.35, ಶಿಕ್ಷಕರ ಕ್ಷೇತ್ರದಲ್ಲಿ ಶೇ. 81.85 ಮತದಾನ ದಾಖಲಾಗಿದೆ. ಪೂ. 8 ರಿಂದ ಸಂಜೆ 4 ಗಂಟೆಯವರೆಗೆ ಮತದಾನ ನಡೆಯಿತು. ಪಧವೀಧರ ಕ್ಷೆತ್ರದಲ್ಲಿ
1395 ಮತದಾರರ ಪೈಕಿ 559 ಗಂಡು ಹಾಗೂ 534 ಹೆಣ್ಣು ಸೇರಿ ಒಟ್ಟು 1093 ಮತದಾರರು ಮತ ಚಲಾಯಿಸಿ ಶೇ.78.35 ಮತದಾನ ದಾಖಲಾಗಿದೆ. ಶಿಕ್ಷಕರ ಕ್ಷೇತ್ರದಲ್ಲಿ 529 ಮತದಾರರಲ್ಲಿ 202 ಗಂಡು ಹಾಗೂ 231 ಹೆಣ್ಣು ಸೇರಿ 433 ಮತದಾರರು ಮತ ಚಲಾಯಿಸಿ ಶೇ.81.85 ಮತದಾನ ದಾಖಲಾಗಿದೆ. ಪದವೀಧರ ಕ್ಷೇತ್ರದಲ್ಲಿ
ಸುಳ್ಯದಲ್ಲಿ 478 ಗಂಡು ಹಾಗೂ 443 ಹೆಣ್ಣು ಸೇರಿ 921 ಮಂದಿ ಮತ ಚಲಾಯಿಸಿ ಶೇ. 79.26, ಪಂಜದಲ್ಲಿ 81 ಗಂಡು ಹಾಗೂ 91 ಹೆಣ್ಣು ಸೇರಿ 172 ಮತದಾರರು ಮತ ಚಲಾಯಿಸಿ ಶೇ.73.82 ಮತದಾನವಾಗಿದೆ.
ಶಿಕ್ಷಕರ ಕ್ಷೇತ್ರದಲ್ಲಿ ಸುಳ್ಯ ಮತಗಟ್ಟೆಯಲ್ಲಿ 180 ಗಂಡು 205 ಹೆಣ್ಣು ಸೇರಿ 385 ಮತದಾನವಾಗಿ ಶೇ.81.40 ಮತದಾನವಾಗಿದೆ. ಪಂಜದಲ್ಲಿ 22 ಗಂಡು, 26 ಹೆಣ್ಣು, 48 ಮಂದಿ ಮತದಾನ ಮಾಡಿ ಶೇ.85.71 ಮತದಾನವಾಗಿದೆ.