ಬೆಂಗಳೂರು: ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಶುಕ್ರವಾರ ಸಚಿವರಾದ ಅರಣ್ಯ ಸಚಿವರಾದ ಈಶ್ವರ ಬಿ ಖಂಡ್ರೆ ಅವರನ್ನು ಭೇಟಿ ಮಾಡಿದರು. ಬೆಂಗಳೂರು ವಿಕಾಸ ಸೌಧದ ಕಛೇರಿಯಲ್ಲಿ ಸಚಿವರನ್ನು ಭೇಟಿ ಮಾಡಿ ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದಲ್ಲಿನ ಅರಣ್ಯ ವಿಭಾಗದ ಕಾರ್ಮಿಕರಿಗೆ 2021-22ನೇ ಸಾಲಿನ ಬೋನಸ್ ಬಿಡುಗಡೆ ಮಾಡುವ
ಬಗ್ಗೆ ಚರ್ಚೆ ನಡೆಸಿದರು. ಅರಣ್ಯ ನಿಗಮದಲ್ಲಿ ರಬ್ಬರ್ ಕಾರ್ಮಿಕರಿಗೆ ದುಡಿಯುತ್ತಿರುವವರಿಗೆ 2021-22ನೇ ಸಾಲಿನ ಶೇ 20% ಬೋನಸ್ ನೀಡಲು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಕೋರಿದರು. ಸರ್ಕಾರ ಮಟ್ಟದಲ್ಲಿ ಚರ್ಚೆ ಮಾಡಿ ತ್ವರಿತವಾಗಿ ಕ್ರಮ ಕೈಗೊಳ್ಳವುದಾಗಿ ಸಚಿವರು ಭರವಸೆ ನೀಡಿದ್ದಾರೆ ಎಂದು ಶಾಸಕರ ಕಚೇರಿ ಪ್ರಕಟಣೆ ತಿಳಿಸಿದೆ.
ಈ ಸಂದರ್ಭದಲ್ಲಿ ಸುಳ್ಯ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ,ಬಿಜೆಪಿ ರೈತ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಮಹೇಶ್ ಕುಮಾರ್ ರೈ ಮೇನಾಲ, ಕಾರ್ಮಿಕರ ಮುಖಂಡರಾದ ಸುಬ್ಬಯ್ಯ ಬೆಂಗಮಲೆ , ಶಂಕರ ಲಿಂಗಂ ಕೆ ತೊಡಿಕಾನ, ಷಣ್ಮುಗಂ ಕಲ್ಲುಗುಂಡಿ, ಮಹೇಶ್ವರ ಸೊಣಂಗೇರಿ, ವಾಸು ಮತ್ತಿತರರು ಐವರ್ನಾಡು ಉಪಸ್ಥಿತರಿದ್ದರು.