ಸುಳ್ಯ:ವರ್ಷಂಪ್ರತಿ ಆಚರಿಸಿಕೊಂಡು ಬರುತ್ತಿರುವ ಪ್ರವಾದಿ ಮಹಮ್ಮದ್ ಮುಸ್ತಾಫ (ಸ.ಅ)ರವರ ಜನ್ಮ ದಿನಾಚರಣೆಯ ಅಂಗವಾಗಿ ಸುಳ್ಯ ತಾಲೂಕು ಮೀಲಾದ್ ಸಮಿತಿಯ ನೇತೃತ್ವದಲ್ಲಿ ಸೆ.20 ರಂದು ಸುಳ್ಯದಲ್ಲಿ ಬೃಹತ್ ಮಿಲಾದ್ ಕಾಲ್ನಡಿಗೆ ಜಾಥಾ ನಡೆಯಿತು. ಶುಕ್ರವಾರ ಸಂಜೆ 4 ಗಂಟೆಗೆ ಮೊಗರ್ಪಣೆ ಮಸೀದಿ ವಠಾರದಿಂದ
ಕಾಲ್ನಡಿಗೆ ಜಾಥಾ ಪ್ರಾರಂಭಗೊಂಡು ಗಾಂಧಿನಗರ ಪೆಟ್ರೋಲ್ ಪಂಪ್ ಮುಂಭಾಗದ ವೇದಿಕೆಯ ತನಕ ಪ್ರವಾದಿ ಸಂದೇಶ ಸಾರಿದ ಆಕರ್ಷಕ ಜಾಥಾ ನಡೆಯಿತು. ಜಾಥಾದಲ್ಲಿ ಜಿಲ್ಲಾ ಹಾಗೂ ತಾಲೂಕಿನ ಪ್ರಖ್ಯಾತ ದಫ್ ತಂಡಗಳು ಭಾಗವಹಿಸಿ ದಫ್ ಪ್ರದರ್ಶನ ನೀಡಿದರು.ಆಕರ್ಷಕ ವಸ್ತ್ರ ಧರಿಸಿ ಪ್ರವಾದಿ ಸಂದೇಶ ಸಾರುತ್ತಾ ಭಾಗವಹಿಸಿದ
ಸ್ಕೌಟ್ ತಂಡಗಳು ಜಾಥಾದ ಪ್ರಮುಖ ಆಕರ್ಷಣೆಯಾಗಿತ್ತು. ಆಕರ್ಷಕ
ಪ್ರದರ್ಶನಗಳೊಂದಿಗೆ ಸುಳ್ಯದ ಮುಖ್ಯ ರಸ್ತೆಯಲ್ಲಿ ಸಾಗಿದ ಜಾಥಾದಲ್ಲಿ ಮಿಲಾದ್ ಸಮಿತಿ, ಪದಾಧಿಕಾರಿಗಳು, ಸದಸ್ಯರು, ಮದ್ರಸಾ ವಿದ್ಯಾರ್ಥಿಗಳು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಸದಸ್ಯರು ಭಾಗವಹಿಸಿದ್ದರು.ಮೊಗರ್ಪಣೆ ಮುಹಿಯುದ್ದೀನ್ ಜುಮಾ ಮಸೀದಿಯ ಅಧ್ಯಕ್ಷ ಇಬ್ರಾಹಿಂ ಸೀಫುಡ್ ಹಾಗೂ ಪ್ರಮುಖರು ಸೇರಿ ತಾಲೂಕು ಮಿಲಾದ್ ಸಮಿತಿ ಅಧ್ಯಕ್ಷ ಶರೀಫ್ ಕಂಠಿ ಅವರಿಗೆ ಧ್ವಜ ಹಸ್ತಾಂತರಿಸಿ ಜಾಥಾಕ್ಕೆ ಚಾಲನೆ ನೀಡಿದರು.
ಮೊಗರ್ಪಣೆ ಮಸೀದಿಯ ಮುದರೀಸ್ ಹಾಫಿಳ್ ಶೌಖತ್ ಅಲಿ ಸಖಾಫಿ ದುವಾ ನೆರವೇರಿಸಿದರು.ಪ್ರಮುಖರಾದ ಟಿ.ಎಂ.ಶಹೀದ್ ತೆಕ್ಕಿಲ್, ಮಹಮ್ಮದ್ ಇಕ್ಬಾಲ್ ಎಲಿಮಲೆ, ಅಬ್ದುಲ್ ರಹಿಮಾನ್ ಸಂಕೇಶ, ಕೆ.ಎಂ.ಮುಸ್ತಫ, ತಾಲೂಕು ಮಿಲಾದ್ ಸಮಿತಿಯ ಅಧ್ಯಕ್ಷ ಶರೀಫ್ ಕಂಠಿ, ಸಂಚಾಲಕರಾದ ಕೆ.ಎಸ್.ಉಮ್ಮರ್, ಅಬ್ದುಲ್ ಕಲಾಂ, ಸಮಿತಿಯ ಉಪಾಧ್ಯಕ್ಷರಾದ ಸಿದ್ದೀಕ್ ಕೊಕ್ಕೋ,ಎನ್. ಎ.ಜುನೈದ್, ಅಬ್ದುಲ್ ರಶೀದ್ ಜಟ್ಟಿಪಳ್ಳ , ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಝೀಝ್ ಸಂಗಮ್, ಜೊತೆ ಕಾರ್ಯದರ್ಶಿಗಳಾದ ಕಲಂದರ್ ಎಲಿಮಲೆ, ಮುನಾಫರ್, ಉನೈಸ್ ಪೆರಾಜೆ ಹಾಗೂ ನವಾಜ್ ಪಂಡಿತ್,ಇಕ್ಬಾಲ್ ಸುಣ್ಣಮೂಲೆ,
ಪ್ರಮುಖರಾದ ಎಸ್.ಸಂಶುದ್ದೀನ್, ಮಹಮ್ಮದ್ ಕುಂಞಿ ಗೂನಡ್ಕ, ಅಬ್ದುಲ್ಲಾ ಕಟ್ಟೆಕ್ಕಾರ್, ಅಬ್ದುಲ್ ಮಜೀದ್ ಜನತಾ, ಎ.ಬಿ.ಇಬ್ರಾಹಿಂ, ಕತ್ತರ್ ಇಬ್ರಾಹಿಂ ಹಾಜಿ, ಶಾಹುಲ್ ಹಮೀದ್ ಕುತ್ತಮೊಟ್ಟೆ, ಅಬ್ದುಲ್ ರಹಮಾನ್ ಮೊಗರ್ಪಣೆ, ನ.ಪಂ.ಸದಸ್ಯ ರಿಯಾಝ್ ಕಟ್ಟೆಕಾರ್ ಮತ್ತಿತರರು ಉಪಸ್ಥಿತರಿದ್ದರು.