ಕಲ್ಲಪಳ್ಳಿ:ಗಡಿಪ್ರದೇಶವಾದ ಕಲ್ಲಪಳ್ಳಿಯಲ್ಲಿ ಚಿರತೆಯೊಂದು ಸತ್ತಿರುವ ಘಟನೆ ವರದಿಯಾಗಿದೆ. ಕಲ್ಲಪಳ್ಳಿಯ ಪೆರುಮುಂಡದ ಬೀರುದಂಡು ಎಂಬಲ್ಲಿ ಮಂಗಳವಾರ ಬೆಳಿಗ್ಗೆ ಚಿರತೆ ಕಳೇಬರ ಪತ್ತೆಯಾಗಿದೆ. ಬೀರುದಂಡಿನ ಖಾಸಗೀ ವ್ಯಕ್ತಿಯ ಸ್ಥಳದಲ್ಲಿ
ಚಿರತೆ ಸತ್ತು ಬಿದ್ದಿರುವುದು ಕಂಡು ಬಂದಿದೆ.ಸ್ಥಳೀಯರು ನೀಡಿದ ಮಾಹಿತಿಯಂತೆ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ. ಮರಣೋತ್ತರ ಪರೀಕ್ಷಾ ವರದಿ ದೊರೆತ ಬಳಿಕ ಹೆಚ್ಚಿನ ಮಾಹಿತಿ ತಿಳಿಯಬಹುದೆಂದು ಅಧಿಕಾರಿಗಳು ತಿಳಿಸಿದ್ದಾರೆ. ಚಿರತೆ ಸತ್ತು ಬಿದ್ದಿರುವುದು ತಿಳಿದು ಹಲವು ಮಂದಿ ಆಗಮಿಸಿದ್ದರು.












