ಸುಳ್ಯ:ಕಲೆ,ಸಂಸ್ಕೃತಿಯನ್ನು ಪೋಷಿಸಿ ಬೆಳೆಸುವುದರ ಜೊತೆಗೆ ಶಾಸ್ತ್ರೀಯ ನೃತ್ಯ ಕಲೆಗಳು ಗ್ರಾಮೀಣ ಭಾಗದ ಮನೆ ಮನಗಳನ್ನು ಮುಟ್ಟಲು ‘ಮೇದಿನಿ ಉತ್ಸವ’ ಶಾಸ್ತ್ರೀಯ ನೃತ್ಯೋತ್ಸವ ಸಹಕಾರಿಯಾಗಿದೆ ಎಂದು ಪದ್ಮಶ್ರೀ ಪುರಸ್ಕೃತರಾದ ಡಾ.ಗಿರೀಶ್ ಭಾರದ್ವಾಜ್ ಹೇಳಿದರು.ಮಂಡ್ಯ ಹಾಗೂ ಮೈಸೂರಿನಲ್ಲಿ ಶಾಸ್ತ್ರೀಯ ನೃತ್ಯ ಕಲಾ ಕ್ಷೇತ್ರದಲ್ಲಿ ಖ್ಯಾತಿ ಗಳಿಸಿರುವ ಗುರುದೇವ ಲಲಿತ ಕಲಾ ಅಕಾಡೆಮಿಯ ವತಿಯಿಂದ ಕನಕಮಜಲಿನ ಗುರುದೇವ್ ಕಲಾ ಗ್ರಾಮದಲ್ಲಿ ನ.25ರಂದು ನಡೆದ ಎರಡನೇ ವರ್ಷದ

ರಾಷ್ಟ್ರೀಯ ನೃತ್ಯೋತ್ಸವ ‘ಮೇದಿನಿ ಉತ್ಸವ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಡಾ.ಗಿರೀಶ್ ಭಾರದ್ವಾಜ್ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು. ಕೊಡಗು ಜಿಲ್ಲಾ ಸಾಹಿತ್ಯ ಪರಿಷತ್ನ ಕೋಶಾಧಿಕಾರಿ ಸಂಪತ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಕಾಞಂಗಾಡ್ನ ಕಲಾವಿದರಾದ ನಾರಾಯಣ್, ಕರ್ನಾಟಕ ಕಲಾಶ್ರೀ ಪುರಸ್ಕೃತರಾದ ವಿದುಷಿ ನಯನ ರೈ, ವಿದ್ವಾನ್ ದೀಪಕ್ ಕುಮಾರ್, ಮಹಾಲಸಾ ದೃಶ್ಯಕಲಾ ಮಹಾವಿದ್ಯಾಲಯ ಅನ್ವಯ ಕಲಾ ವಿಭಾಗದ ಮುಖ್ಯಸ್ಥ ಸಯ್ಯದ್ ಆಸಿಫ್ ಅಲಿ, ಕನಕಮಜಲು ಗ್ರಾಮ ಪಂಚಾಯತ್ ಅಧ್ಯಕ್ಷೆ ಶಾರದಾ ಉಗ್ಗಮೂಲೆ ಮುಖ್ಯ ಅತಿಥಿಗಳಾಗಿದ್ದರು.
ಗೌರವ ಉಪಸ್ಥಿತರಾಗಿ ಅರೆಭಾಷೆ ಅಕಾಡೆಮಿಯ ಮಾಜಿ ಅಧ್ಯಕ್ಷ ಲಕ್ಷ್ನೀನಾರಾಯಣ ಕಜೆಗದ್ದೆ, ಕಲಾ ಪೋಷಕರಾದ ರವಿಶಂಕರ ಕಲ್ಲೂರಾಯ, ಅಂಕಣಕಾರರಾದ ಕುಮಾರ್ ಪೆರ್ನಾಜೆ, ಪ್ರಮುಖರಾದ ಕೆ.ಎಸ್.ಗೋಪಾಲಕೃಷ್ಣ, ಬಾಲಕೃಷ್ಣ ಗೌಡ ಮೂರ್ಜೆ, ನಾರಾಯಣ ಗೌಡ ಬೊಮ್ಮೆಟ್ಟಿ, ಹರೀಶ್ ಮೂರ್ಜೆ, ನಳಿನಾಕ್ಷಿ ವಸಂತ ಪಲ್ಲತ್ತಡ್ಕ, ತೀರ್ಥಾನಂದ ದುಗ್ಗಳ, ಮಹಿಳಾ ಮಂಡಲದ ಅಧ್ಯಕ್ಷೆ ಕುಸುಮಾ, ಯುವಕ ಮಂಡಲದ

ಅಧ್ಯಕ್ಷ ರಕ್ಷಿತ್ ಅಕ್ಕಿಮಾಲೆ, ಭಾಗವಹಿಸಿದ್ದರು.
ಗುರುದೇವ ಲಲಿತಕಲಾ ಅಕಾಡೆಮಿಯ ಕಲಾ ನಿರ್ದೇಶಕರಾದ ಡಾ.ಚೇತನಾ ರಾಧಾಕೃಷ್ಣ ಪಿ.ಎಂ. ಉಪಸ್ಥಿತರಿದ್ದರು.ಗುರುದೇವ ಲಲಿತಕಲಾ ಅಕಾಡೆಮಿಯ ವ್ಯವಸ್ಥಾಪಕ ನಿರ್ದೇಶಕರಾದ ರಾಧಾಕೃಷ್ಣ ಪಿ.ಎಂ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.
ಪೆರುವಾಜೆ ಡಾ.ಕೆ.ಶಿವರಾಮ ಕಾರಂತ ಸರಕಾರಿ ಪ್ರಥಮ ದರ್ಜೆ ಕಾರ್ಯಕ್ರಮದ ಪ್ರಾಂಶುಪಾಲ ದಾಮೋದರ ಕಣಜಾಲು ಕಾರ್ಯಕ್ರಮ ನಿರ್ವಹಿಸಿದರು.
ಗ್ರಾಮೀಣ ಭಾಗದಲ್ಲಿ ಶಾಸ್ತ್ರೀಯ ನೃತ್ಯ ಕಲಾ ಪ್ರಕಾರಗಳ ಜಾಗೃತಿಗಾಗಿ ರಾಜ್ಯ, ರಾಷ್ಟ್ರ ಮಟ್ಟದ ಕಲಾವಿದರು ಭಾಗವಹಿಸುವ ರಾಷ್ಟ್ರೀಯ ನೃತ್ಯೋತ್ಸವವನ್ನು ಹಮ್ಮಿಕೊಳ್ಳಲಾಗಿದೆ.ಮೂರ್ಜೆ ಶ್ರೀ ಮುತ್ತಣ್ಣ ಹಾಗೂ ಶ್ರೀಮತಿ ನಳಿನಿ ಮುತ್ತಣ್ಣ ನೆನಪಿನಲ್ಲಿ ‘ಮೇದಿನಿ ಉತ್ಸವ’ ಸಂಘಟಿಸಲಾಯಿತು.












