ಮಂಡೆಕೋಲು: ಮಂಡೆಕೋಲು ಕನ್ಯಾನದಲ್ಲಿ ತಾಯಿ ಆನೆಯಿಂದ ಬೇರ್ಪಟ್ಟು ಒಂಟಿಯಾದ ಮರಿ ಆನೆಯನ್ನು ರಕ್ಷಣೆ ಮಾಡಿದ ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಿ ಆನೆ ಹಿಂಡಿನ ಸಮೀಪ ಬಿಡಲಾಗಿದೆ. ಆನೆ ಮರಿ ತಾಯಿ ಹತ್ತಿರ ಸೇರಲು ಕಾತರದಿಂದ ಕಾಯಲಾಗುತ್ತದೆ. ಸಂಜೆಯ ವೇಳೆಗೆ ಅರಣ್ಯದಲ್ಲಿ ಆನೆ ಹಿಂಡನ್ನು ಪತ್ತೆ ಹಚ್ಚಲಾಗಿದ್ದು ಆನೆ ಮರಿಯನ್ನು
ಹಿಂಡಿನ ಸಮೀಪ ಬಿಡಲಾಗಿದೆ. ಆನೆ ಹಿಂಡು ಮರಿಯನ್ನು ಗುಂಪಿಗೆ ಸೇರಿಸುತ್ತವೆಯಾ ಅಥವಾ ಮರಿ ಹಿಂತಿರುಗಿ ಬರಯತ್ತದಾ ಅಂತ ನಿರೀಕ್ಷಿಸಲಾಗುತ್ತಿದೆ ಎಂದು ಸುಳ್ಯ ವಲಯ ಅರಣ್ಯಾಧಿಕಾರಿ ಎನ್.ಮಂಜುನಾಥ್ ತಿಳಿಸಿದ್ದಾರೆ. ಮಂಡೆಕೋಲು ಗ್ರಾಮದ ಕನ್ಯಾನ ಶಾಲೆಯ ಬಳಿಯಲ್ಲಿ ಬೆಳಗ್ಗೆ ಹಿಂಡಿನಿಂದ ಬೇರ್ಪಟ್ಟು ಒಂಟಿಯಾದ ಮರಿಯಾನೆ ಕಂಡು ಬಂದಿತ್ತು. ಅಂದಾಜು 3 ತಿಂಗಳು ಪ್ರಾಯದ ಮರಿಯಾನೆ ಆನೆಗಳ ಹಿಂದಿನಿಂದ ಬೇರ್ಪಟ್ಟಿತ್ತು.
ಅರಣ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ವನ್ಯಜೀವಿ ವಿಭಾಗದ ವನ್ಯಜೀವಿ ಚಿಕಿತ್ಸಾ ತಜ್ಞ ವೈದ್ಯರು ಮರಿ ಆನೆಯನ್ನು ಆರೈಕೆ ಮಾಡಿ ತಾಯಿ ಆನೆಯೊಂದಿಗೆ ಸೇರಿಸಲು ದಿನಪೂರ್ತಿ ಕಾರ್ಯಾಚರಣೆ ನಡೆಸಿ ಆನೆ ಮರಿಯನ್ನು ಆನೆ ಹಿಂಡಿನ ಸಮೀಪ ಬಿಡಲಾಗಿದೆ.