ಸಂಪಾಜೆ:ಸಂಪಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಕೆಲಸ ಮಾಡುವ ಕಾರ್ಮಿಕರ ಮಕ್ಕಳ ಹಾರೈಕೆ ಮಾಡಲು ಸರಕಾರದ ಯೋಜನೆ ‘ಮಗುವಿನ ಮನೆ’ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಂಜೀವಿನಿ ಕಟ್ಟಡದಲ್ಲಿ ಉದ್ಘಾಟನೆಗೊಂಡಿತು.
ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಮತಿ ಶಕ್ತಿವೇಲು ಉದ್ಘಾಟಿಸಿದರು. ಗ್ರಾಮ ಪಂಚಾಯತ್ ಉಪಾಧ್ಯಕ್ಷ ಎಸ್. ಕೆ. ಹನೀಫ್, ಮಾಜಿ ಅಧ್ಯಕ್ಷರಾದ
ಜಿ ಕೆ. ಹಮೀದ್ ಗೂನಡ್ಕ, ಜಗದೀಶ್ ರೈ, ಸುಂದರಿ ಮುಂಡಡ್ಕ, ಸದಸ್ಯರಾದ ವಿಮಲಾ ಪ್ರಸಾದ್, ರಜನಿ ಶರತ್, ಅನುಪಮಾ, ಅಂಗನವಾಡಿ ಮೇಲ್ವಿಚಾರಕರಾದ ದೀಪಿಕಾ, ಉದ್ಯೋಗ ಖಾತ್ರಿ ಯೋಜನೆ ಸಹಾಯಕ ನಿರ್ದೇಶಕಿ ಸರೋಜಿನಿ, ಕೋಆರ್ಡಿನೇಟರ್ ನಮಿತಾ. ಕಮ್ಯುನಿಟಿ ಹೆಲ್ತ್ ಆಫೀಸರ್ ಚಿತ್ರಕಲಾ ಹಾಗೂ ಹರ್ಷಿತಕುಮಾರಿ ಅಂಗನವಾಡಿ ಕಾರ್ಯಕರ್ತರುಗಳಾದ ಜಯಂತಿ, ಶಾರದಾ, ಧರ್ಮಕಲಾ, ಹರ್ಷಿತಕುಮಾರಿ ಜಯಲಕ್ಷ್ಮಿ, ಪುಷ್ಪ, ಶೀಲಾವತಿ ಆಶಾ ಕಾರ್ಯಕರ್ತರಾದ

ಸೌಮ್ಯ, ಪ್ರೇಮಲತಾ,ಆಶಾ ವಿನಯ್ ಸಂಜೀವಿನಿ ಒಕ್ಕೂಟದ ಕಾಂತಿ ಬಿ. ಎಸ್ ಹಾಗೂ ಸೌಮ್ಯ, ಭಾರತಿ ಉದ್ಯೋಗ ಖಾತ್ರಿ ಕಾಯಕ ಬಂದು ಸವಿತಾ ಕಿಶೋರ್ ಕೇರ್ ಟೆಕರ್ ಹರಿಣಾಕ್ಷಿ ಹಾಗೂ ದಿವ್ಯಾ ಸಿಬ್ಬಂದಿ ಹಸೀನಾ ಉಪಸ್ಥಿತರಿದ್ದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸರಿತಾ ಡಿಸೋಜಾ ಸ್ವಾಗತಿಸಿ ಯೋಜನೆಯ ಅನುಷ್ಠಾನ ಬಗ್ಗೆ ಮಾಹಿತಿ ನೀಡಿದರು. ಸವಿತಾ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.