ಸುಳ್ಯ:ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡ ಸಂದರ್ಭದಲ್ಲಿ ಹಸು ಕಟ್ಟುವಾಗ ಆಕಸ್ಮಿಕವಾಗಿ ಮೃತಪಟ್ಟ ಅಮರ ಪಡ್ನೂರು ಗ್ರಾಮದ ರಾಧಾಕೃಷ್ಣ ಅವರ ಕುಟುಂಬಕ್ಕೆ ಕೃಷಿ ಇಲಾಖೆಯ ವತಿಯಿಂದ 2 ಲಕ್ಷ ರೂ ಪರಿಹಾರ ಮಂಜೂರಾಗಿದ್ದು ಮಂಜೂರಾತಿ ಪತ್ರವನ್ನು ಹಸ್ತಾಂತರ
ಮಾಡಲಾಗಿದೆ. ಶಾಸಕಿ ಭಾಗೀರಥಿ ಮುರುಳ್ಯ ರಾಧಾಕೃಷ್ಣ ಅವರ ಪತ್ನಿ ರಮಾ ಅವರಿಗೆ ಮಂಜೂರಾತಿ ಪತ್ರ ನೀಡಿದರು. ರಾಧಾಕೃಷ್ಣ ಅವರ ಪತ್ನಿ ರಮಾ ಅವರಿಗೆ ಮಾಸಿಕ ತಲಾ ಎರಡು ಸಾವಿರ ರೂ ವಿಧವಾ ವೇತನ ಹಾಗೂ ಮಕ್ಕಳಿಗೆ ಶಿಕ್ಷಣಕ್ಕೆ ನೆರವು ಹಾಸ್ಟೆಲ್ ವ್ಯವಸ್ಥೆ ಮಂಜೂರಾಗಿದೆ ಎಂದು
ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಗುರುಪ್ರಸಾದ್ ತಿಳಿಸಿದ್ದಾರೆ. ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಎಸ್.ಎನ್.ಮನ್ಮಥ, ಕೇಶವ ಕರ್ಮಾಜೆ, ಗ್ರಾ.ಪಂ.ಸದಸ್ಯ, ರಾಧಾಕೃಷ್ಣ ಕೆ. ಚಂದ್ರಶೇಖರ ಪಡ್ಪು, ಜಯರಾಮ ಚೆನ್ನಮಲೆ, ಮೋಹನ ನಡುಗಲ್ಲು, ಪದ್ಮನಾಭ ಬೀಡು, ಶಾಂತಾರಾಮ ಕಣಿಲೆಗುಂಡಿ, ಹರೀಶ್ ಉಬರಡ್ಕ, ಪ್ರಸಾದ್ ಕಾಟೂರು ಮತ್ತಿತರರು ಉಪಸ್ಥಿತರಿದ್ದರು.