ಸುಳ್ಯ: ಸುಳ್ಯ, ಕಡಬ ತಾಲೂಕಿನ ವಿವಿಧ ಭಾಗಗಳಲ್ಲಿ ಬುಧವಾರ ಸಂಜೆ ಮಳೆಯಾಗಿದೆ.ಬಹುತೇಕ ಕಡೆಗಳಲ್ಲಿ ಹನಿ ಮಳೆಯಾದರೆ ಕೆಲವೆಡೆ ಸಾಧಾರಣ ಮಳೆಯಾಗಿದೆ. ಸಂಪಾಜೆ ಭಾಗದಲ್ಲಿ ಉತ್ತಮ ಮಳೆಯಾಗಿದೆ. ಗುಡುಗು, ಗಾಳಿ ಸಹೀತ ಮಳೆಯಾಗಿರುವ ಬಗ್ಗೆ ವರದಿಯಾಗಿದೆ. ವಿವಿಧ ಭಾಗಗಳಲ್ಲಿ
ಎಣ್ಮೂರಿನಲ್ಲಿ ಧರೆಗುರುಳಿದ ಮರ
ಭಾರೀ ಗಾಳಿ ಬೀಸಿದ್ದು ಕೆಲವೆಡೆ ಮರ ಬಿದ್ದು ಹಾನಿಯಾಗಿದೆ. ಸಂಪಾಜೆ ದೊಡ್ಡಡ್ಕದ ರಾಮಚಂದ್ರ ಎಂಬವರ ಮನೆಗೆ ಮರ ಬಿದ್ದು ಹಾನಿಯಾಗಿದೆ.ಇಲ್ಲಿ ಮನೆ, ಶೌಚಾಲಯಕ್ಕೆ ಹಾನಿಯಾಗಿದೆ. ಬೈಲೆಯ ಟೈಲರ್ ನಾಗೇಶ ಎಂಬವರ ಮನೆಗೆ ಮರ ಬಿದ್ದು ಹಾನಿ ಸಂಭವಿಸಿದೆ. ದೊಡ್ಡಡ್ಕದ ಉಮ್ಮರ್ ಎಂಬವರ ಅಂಗಡಿಗೆ ಮರದ ಕೊಂಬೆ ಮುರಿದು ಬಿದ್ದಿದೆ. ಸಂಪಾಜೆ ಗ್ರಾ.ಪಂ.ಉಪಾಧ್ಯಕ್ಷ ಎಸ್.ಕೆ.ಹನೀಫ ಮತ್ತಿತರರು ಭೇಟಿ ನೀಡಿದರು.
ಎಣ್ಮೂರಿನಲ್ಲಿ ಗಾಳಿಗೆ ಮರ ಮುರಿದು ಬಿದ್ದಿದೆ ತಾಲೂಕಿನ ವಿವಿಧ ಭಾಗಗಳಲ್ಲಿ ಗಾಳಿಗೆ ಅಲ್ಲಲ್ಲಿ ಮರ ಬಿದ್ದು ಹಾನಿ ಸಂಭವಿಸಿದೆ. ವಿದ್ಯುತ್ ಕಂಬಗಳಿಗೆ, ತಂತಿಗಳಿಗೆ ಹಾನಿಯಾಗಿದೆ. ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.ಸಂಜೆಯ ವೇಳೆ ಎಲ್ಲೆಡೆ
ಸಂಪಾಜೆಯಲ್ಲಿ ಮನೆಯ ಮೇಲೆ ಬಿದ್ದ ಮರ
ದಟ್ಟ ಮೋಡ ಕವಿದಿದ್ದರೂ ಮಳೆ ಸುರಿದಿಲ್ಲ. ಬಹುತೇಕ ಕಡೆ ಕೆಲ ನಿಮಿಷಗಳ ಕಾಲ ತುಂತುರು ಮಳೆಯಷ್ಟೇ ಸುರಿಯಿತು.ಮಡಪ್ಪಾಡಿಯಲ್ಲಿ ಉತ್ತಮ ಮಳೆಯಾಗಿದೆ. ಉಬರಡ್ಕದಲ್ಲಿ ಸಾಧಾರಣ ಮಳೆಯಾಗಿದೆ. ಸುಳ್ಯ ನಗರದಲ್ಲಿ ಭಾರೀ ಗಾಳಿ ಬೀಸಿದ್ದು ಕೆಲ ಹೊತ್ತು ಹನಿ ಮಳೆಯಾಗಿದೆ.ಬಳ್ಪದಲ್ಲಿ ಗುಡುಗು, ಗಾಳಿ ಸಹೀತ ಮಳೆಯಾಗಿದೆ.ಕೋಟೆ ಮುಂಡುಗಾರು, ಎಣ್ಮೂರಿನಲ್ಲಿ ಹನಿ ಮಳೆಯಾಗಿದೆ. ಮಲ್ಲಾರದಲ್ಲಿ ಸಾಧಾರಣ ಮಳೆಯಾಗಿದೆ. ವಿವಿಧ ಕಡೆ ಹನಿ ಮಳೆಯಾಗಿರುವ ಬಗ್ಗೆ ವರದಿಯಾಗಿದೆ.