ಮಡಿಕೇರಿ:ದಶಮಂಪಟಗಳ ವೈಭವದ ಶೋಭಾಯಾತ್ರೆಯೊಂದಿಗೆ ಮಡಿಕೇರಿ ದಸರಾ ಸಂಪನ್ನಗೊಂಡಿತು.ಬೆಳಕಿನ ವೈಭವದಲ್ಲಿ ಝಗಮಗಿಸಿದ ಮಂಟಪಗಳನ್ನು ಲಕ್ಷಾಂತರ ಮಂದಿ ಕಣ್ತುಂಬಿಕೊಂಡರು.
ಹತ್ತು ಮಂಟಪಗಳು ಒಂದರಿಂದ ಮತ್ತೊಂದು ವಿಸ್ಮಯಗೊಳಿಸಿದವು. ಹತ್ತು ಮಂಟಪಗಳನ್ನೂ ಅಪಾರ ಜನಸ್ತೋಮ
ಮನದಣಿಯೇ ಕಣ್ತುಂಬಿಕೊಂಡರು.ಮಂಟಪದಲ್ಲಿ ಪೌರಾಣಿಕ ಕಥಾವಸ್ತು ಪ್ರದರ್ಶಿತಗೊಂಡಿತು. ಮೊದಲಿಗೆ ಪೇಟೆ ಶ್ರೀರಾಮಮಂದಿರದ ಮಂಟಪವು ‘ವೈಕುಂಠ ದರ್ಶನ’ ಕಥಾವಸ್ತುವನ್ನು ಪ್ರದರ್ಶಿಸುತ್ತಾ ಮುಂದೆ ಸಾಗಿತು. ನಂತರ ದೇಚೂರು ಶ್ರೀರಾಮಮಂದಿರ, ದಂಡಿನ ಮಾರಿಯಮ್ಮ, ಚೌಡೇಶ್ವರಿ, ಕಂಚಿ ಕಾಮಾಕ್ಷಿ, ಚೌಟಿ ಮಾರಿಯಮ್ಮ, ಕೋದಂಡರಾಮ, ಕೋಟೆ ಮಾರಿಯಮ್ಮ, ಕೋಟೆ ಗಣಪತಿ ಹಾಗೂ ಕರವಲೆ ಭಗವತಿ ದೇಗುಲಗಳು ಮಂಟಪಗಳಲ್ಲಿ ಪೌರಾಣಿಕ ಕಥಾವಸ್ತುಗಳನ್ನು ಪ್ರದರ್ಶಿಸಿದವು.